ಸುರತ್ಕಲ್: ಗುಡ್ಡ ಕುಸಿದು ಕಾರ್ಮಿಕ ಮೃತ್ಯು; ಇನ್ನೋರ್ವ ಗಂಭೀರ

ಮಂಗಳೂರು, ಜ.14: ಸುರತ್ಕಲ್ ಸಮೀಪದ ಚೇಳೈರು ಎಂಬಲ್ಲಿ ಶನಿವಾರ ಗುಡ್ಡ ಕುಸಿದು ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಓಬಳೇಶ್ವರ ಎಂದು ಗುರುತಿಸಲಾಗಿದೆ. ಸೇತುವೆಯ ಮೇಲ್ಭಾಗದಲ್ಲಿ ಹಳಿಗಳನ್ನು ನೇರಗೊಳಿಸಿದ್ದರಿಂದ, ಇತರ ಕಾರ್ಮಿಕರು ಅದರ ಅಡಿಯಲ್ಲಿ ಬೆಟ್ಟವನ್ನು ಅಗೆಯುತ್ತಿದ್ದರು. ರೈಲು ಹಠಾತ್ತನೆ ಬಂದಿದ್ದರಿಂದ ಭೂಮಿ ಕುಸಿದು ಸೇತುವೆಯ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.

ಕುಸಿದ ಗುಡ್ಡದ ಮಣ್ಣು ಓಬಳೇಶ್ವರಪ್ಪ, ಗೋವಿಂದಪ್ಪ, ತಿಮ್ಮಪ್ಪ, ಈರಣ್ಣ, ಸಂಜೀವ ಹಾಗೂ ಅವರ ಪತ್ನಿ ರೇಖಾ ಅವರ ಮೇಲೆ ಬಿದ್ದಿದೆ. ಆದರೆ, ಓಬಳೇಶ್ವರಪ್ಪ ಮತ್ತು ಗೋವಿಂದಪ್ಪ ಅವರ ಮೇಲೆ ಭಾರೀ ಪ್ರಮಾಣದ ಮಣ್ಣಿನ ರಾಶಿ ಬಿದ್ದಿದೆ. ಇಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಓಬಳೇಶ್ವರ ಕೊನೆಯುಸಿರೆಳೆದರು. ಗೋವಿಂದಪ್ಪ ಸ್ಥಿತಿ ಚಿಂತಾಜನಕವಾಗಿದೆ.

ಈ ಸಂಬಂಧ ಕಾರ್ಮಿಕ ಕಿತ್ತರಾಜು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories