ಐಶಾರಾಮಿ ಪ್ರವಾಸಿ ಹಡಗು ಆಗಮನ

ಮಂಗಳೂರು: ನವ ಮಂಗಳೂರು ಬಂದರ್‌ಗೆ ಶುಕ್ರವಾರ ಐಶಾರಮಿ ವಿದೇಶಿ ಪ್ರವಾಸಿ ಹಡಗು ಆಗಮಿಸಿತು. ಬಹಾಮಾಸ್‌ನಿಂದ 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಗಳೊಂದಿಗೆ ಆಗಮಿಸಿದ ಸೆವೆನ್ ಸೀಸ್ ನ್ಯಾವಿಗೇಟರ್ ಹಡಗಿಗೆ ನವ ಮಂಗಳೂರು ಬಂದರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಹಡಗಿನಲ್ಲಿ ಬಂದವರನ್ನು ಕರಾವಳಿಯ ಸಾಂಪ್ರದಾಯಿಕ ಕಲೆಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಪ್ರವಾಸಿಗರು ಕಾರ್ಕಳದ ಗೊಮಟೇಶ್ವರ ಮೂರ್ತಿ, ಮೂಡಬಿದ್ರೆಯ ಸಾವಿರ ಕಂಬ, ಗೋಕರ್ಣನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಮಂಗಳೂರು ಮಾರುಕಟ್ಟೆ ಮತ್ತಿತರೆಡೆ ಭೇಟಿ ನೀಡಿದರು. ಬಳಿಕ ಹಡಗು ಕೊಚ್ಚಿನ್‌ಗೆ ತೆರಳಿತು.

Latest Indian news

Popular Stories