ಹರೀಶ್ ಪೂಂಜಾ ಮನೆಗೆ ಮೊದಲು ನಾವು ಕಳುಹಿಸದ್ದು ಮೂರೇ ಪೊಲೀಸರನ್ನು ಆದರೆ…ಹೈಡ್ರಾಮದ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ

ಬೆಳ್ತಂಗಡಿ: ಹರೀಶ್ ಪೂಂಜಾ ಮೇಲೆ ದಾಖಲಾಗಿರುವ ಪ್ರಕರಣ ಸಂಬಂಧ ವಿಚಾರಣೆಗೆಂದು ಅವರನ್ನು ಠಾಣೆಗೆ ಕರೆತರಲು ನಾವು ಕೇವಲ ಮೂರೇ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿದ್ದು. ಆದರೆ ಈ ಸಂದರ್ಭದಲ್ಲಿ ಹರೀಶ್ ಪೂಂಜಾ ಪೊಲೀಸರಿಗೆ ಸ್ಪಂದಿಸದೇ ಒಳಗೆ ಹೋಗಿ ಫೋನ್ ಮಾಡಿ ಜನ ಕರೆಸಿದ್ದಾರೆ. ಜನ ಸೇರಿದಾಗ ನಿಯಂತ್ರಿಸಲು ನಾವೂ ಹೆಚ್ಚಿನ ಫೋರ್ಸ್ ಹಾಕಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾನೂನಿನ ಮುಂದೆ ಎಲ್ಲರೂ ಸಮಾನರು. ಜನ ಪ್ರತಿನಿಧಿ ಎಂದ ಮಾತ್ರಕ್ಕೆ ಅವರಿಗೆ ರಿಯಾಯಿತಿ ನೀಡಲಾಗುವುದಿಲ್ಲ. ಹರೀಶ್ ಪೂಂಜಾ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ ಎಂದು ಹೇಳಿದರು.
ಜನ ಸೇರಿಸಿದರೆಂದ ಮಾತ್ರಕ್ಕೆ ಕ್ರಮ ತೆಗೆದು ಕೊಳ್ಳದೇ ಇರಲು ಆಗುವುದಿಲ್ಲ. ಅಪರಾಧ ನಡೆದರೆ ಪ್ರಕರಣ ದಾಖಲಾಗುತ್ತದೆ. ಪ್ರಕರಣ ದಾಖಲಾದರೆ ಸಹಜವಾಗಿಯೇ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.‌ ಅದು ಬಿಟ್ಟು ಜನ ಸೇರಿಸಿದರೆ ವಿಚಾರಣೆ ಮಾಡಲಾಗದೇ ಅಥವಾ ಪ್ರಕರಣ ದಾಖಲಿಸದೇ ಇರಲಾಗುವುದಿಲ್ಲ ಎಂದರು.

ಹರೀಶ್ ಪೂಂಜಾ ರನ್ನು ವಿಚಾರಣೆಗೆ ಕರೆತರಲು ಹೋದಾಗ ಅಲ್ಲಿದ್ದ ಜನ ಪ್ರತಿನಿಧಿಗಳು ಪೂಂಜಾ ತನಿಖೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಸಂಖ್ಯೆಯನ್ನು ಕಡಿಮೆ ಮಾಡಲು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್ ಬಂದಿದ್ದಾರೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.

Latest Indian news

Popular Stories