ಲೈಂಗಿಕ ದೌರ್ಜನ್ಯಕ್ಕೆ ಯತ್ನ; ಚಿಕ್ಕಮ್ಮನನ್ನೇ ಕತ್ತು ಹಿಸುಕಿ ಕೊಲೆಗೈದ ಬಾಲಕ

ಉಪ್ಪಿನಂಗಡಿ: ತನ್ನ‌ ತಾಯಿಯ ತಂಗಿಯ‌ ಬಳಿಯೇ ಲೈಂಗಿಕ ಸಂಪರ್ಕ ನಡೆಸಲು ತೆರಳಿದ ಬಾಲಕ, ಆಕೆ ವಿರೋಧಿಸಿದಾಗ ಕತ್ತು ಹಿಸುಕಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೆರ್ನೆ ಗ್ರಾಮದ ಬಿಳಿಯೂರಿನಲ್ಲಿ ನಡೆದಿದೆ.

ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬ ಮಹಿಳೆ ಬೆಳಗ್ಗಿನ ಜಾವ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಈ ಸಂದರ್ಭದಲ್ಲಿ ಮನೆಯಲ್ಲಿ ಹೇಮಾವತಿಯ ತಾಯಿ, ಮೃತ ಅಕ್ಕನ ಮಗ ಮತ್ತು ಗಂಡ ಇದ್ದರೆಂದು ತಿಳಿದು ಬಂದಿದೆ. ಇವರೆಲ್ಲರೂ ರಾತ್ರಿ ಊಟ ಮುಗಿಸಿ ಮಲಗಿದ್ದರು. ನಡು ರಾತ್ರಿ ಹೇಮಾವತಿಯ 17 ವರ್ಷದ ಅಕ್ಕನ ಮಗ ಹೇಮಾವತಿ ಬಳಿ ಬಂದು ಲೈಂಗಿಕ ಸಂಪರ್ಕಕ್ಕೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಇದಕ್ಕೆ ಹೇಮಾವತಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಲಕ ಕತ್ತು ಹಿಸುಕಿ ಕೊಲೆಗೈದಿದ್ದಾನೆಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಬಾಲಕನ ವಿರುದ್ಧ ಉಪ್ಪಿನಂಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories