ಬೈಕಂಪಾಡಿ: ಅಗ್ನಿ ಅನಾಹುತಕ್ಕೆ ಹೊತ್ತಿ ಉರಿದ ಫ್ಯಾಕ್ಟರಿ

ಮಂಗಳೂರು: ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿಯೊಂದು ಹೊತ್ತಿ ಉರಿದಿದ್ದು, ಕೋಟ್ಯಾಂತರ ರುಪಾಯಿ ನಷ್ಟ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಜೀವ ಹಾನಿ ನಡೆದಿಲ್ಲವೆಂದು ತಿಳಿದು ಬಂದಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಫಿಶ್ ಆಯಿಲ್ ಉತ್ಪದಿಸುವ ಶಿಹಾರ ಎಂಟರ್‌‌ಪ್ರೈಸಸ್‌ನಲ್ಲಿ‌ ಈ ಘಟನೆ ನಡೆದಿದೆ.

ಕೋಳಿ ಹಾಗೂ ಫಿಶ್ ತ್ಯಾಜ್ಯದಿಂದ ಆಯಿಲ್ ಉತ್ಪದಿಸುವ ಫ್ಯಾಕ್ಟರಿಯಾಗಿದ್ದು,
ತಡರಾತ್ರಿ ಗೋಡಾನ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.

Latest Indian news

Popular Stories