ಮಂಗಳೂರು: ವಾಣಿಜ್ಯ ಭೂಪರಿವರ್ತನೆಗೆ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸರ್ಕಾರಿ ಅಧಿಕಾರಿ ಲಾವಣ್ಯ ಅವರನ್ನು ಖುಲಾಸೆಗೊಳಿಸಿ ಮಂಗಳೂರು ದ.ಕ ಜಿಲ್ಲೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದೆ.
ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ ಎಸ್ ರವರು ವಿಚಾರಣೆ ನಡೆಸಿ ಸಾಕ್ಷಿಗಳನ್ನು ವಿಚಾರಿಸಿ ವಾದವಿವಾದಗಳನ್ನು ಆಲಿಸಿ ಆರೋಪಿ ಶ್ರೀಮತಿ ಎಸ್. ಲಾವಣ್ಯರವರ ಮೇಲಿನ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಸದ್ರಿ ಆರೋಪಿ ಶ್ರೀಮತಿ ಎಸ್. ಲಾವಣ್ಯರವರನ್ನು ಆರೋಪ ಮುಕ್ತಗೊಳಿಸಿ ಕೇಸಿನಿಂದ ಬಿಡುಗಡೆಗೊಳಿಸಿದರು.
*ಪ್ರಕರಣದ ವಿವರ:*
ಪುತ್ತೂರು ತಾಲೂಕು ಪುತ್ತೂರು ಕಸಬ ಗ್ರಾಮದ ಸರ್ವೆನಂಬರ್ 41/2A1B ಅಲ್ಲಿ 0.26 ಸೆಂಟ್ಸ್ ಜಾಗವನ್ನು ರಾಮ ಮೋಹನ್ ಪೈ ಅವರು ಸ್ವಾದೀನ ಹೊಂದಿದ್ದು ಅದನ್ನು ವಾಣಿಜ್ಯ ಭೂ ಪರಿವರ್ತನೆಗಾಗಿ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ಪುತ್ತೂರು ನಗರ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರಿಚಯದವರಾದ ಶ್ರೀ ಕೇಶವ ಸುವರ್ಣರವರನ್ನು ಪತ್ತೂರು ನಗರದ ಪ್ರಾಧಿಕಾರದ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನ ಇಲಾಖೆ ಪುತ್ತೂರು ಇಲ್ಲಿಯ ಅಧಿಕಾರಿಯಾದ ಶ್ರೀಮತಿ ಎಸ್. ಲಾವಣ್ಯರವರನ್ನು ದಾಖಲೆ ಬಗ್ಗೆ ವಿಚಾರಿಸಲು ಕಳುಹಿಸಿದ್ದರು.
ಸದ್ರಿ ಕಛೇರಿಯಲ್ಲಿ ಶ್ರೀ ಕೇಶವ ಸುವರ್ಣರು ಶ್ರೀಮತಿ ಎಸ್. ಲಾವಣ್ಯರವರಲ್ಲಿ ರಾಮ ಮೋಹನ್ ಪೈ ರವರ ಭೂ ಪರಿವರ್ತನೆಗಾಗಿ ನಿರಾಕ್ಷೇಪಣಾ ಪತ್ರದ ಬಗ್ಗೆ ವಿಚಾರಿಸಿದಾಗ ಸದ್ರಿ ಶ್ರೀಮತಿ ಎಸ್. ಲಾವಣ್ಯರವರು 20,000 ರುಪಾಯಿ ಲಂಚ ಕೋಟ್ಟರೆ ಮಾತ್ರ ನಿರಾಕ್ಷೇಪಣಾ ಪತ್ರ ಒದಗಿಸುವುದಾಗಿ ಹೇಳಿರುತ್ತಾರೆ.
ಸದ್ರಿ ವಿಚಾರವನ್ನು ಶ್ರೀ ಕೇಶವ ಸುವರ್ಣರವರು ರಾಮ ಮೋಹನ್ ಪೈ ಅವರಲ್ಲಿ 20,000 ರುಪಾಯಿ ಲಂಚ ವನ್ನು ಶ್ರೀಮತಿ ಎಸ್. ಲಾವಣ್ಯರವರಿಗೆ ಕೊಡಬೇಕೆಂದು ಹೇಳಿದ್ದಾರೆಂದು ತಿಳಿಸಿದ್ದರು ಆಗ ರಾಮ ಮೋಹನ್ ಪೈ ಯವರು 10,000 ರುಪಾಯಿಯನ್ನು ನಗದಾಗಿ ಕೇಶವ ಸುವರ್ಣರವರ ಕೈ ಗೆ ಕೊಟ್ಟು ಈ ವಿಷಯವನ್ನು ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಠಾಣೆ ದ.ಕ ಜಿಲ್ಲೆ ಮಂಗಳೂರು ಇವರಿಗೆ ದೂರು ಕೊಡುವಂತೆ ತಿಳಿಸಿದ್ದರು.
ಅದರಂತೆ ಕೇಶವ ಸುವರ್ಣರವರು ಸದ್ರಿ ರೂಪಾಯಿ 10,000 ವನ್ನು ಹಿಡಿದುಕೊಂಡು ಬ್ರಷ್ಟಾಚಾರ
ನಿಗ್ರಹದಳ ಪೋಲಿಸ್ ಠಾಣೆ ದ.ಕ ಜಿಲ್ಲೆ ಮಂಗಳೂರು ಅಲ್ಲಿಗೆ ಹೋಗಿ ದೂರು ಕೊಟ್ಟರು . ಸದ್ರಿ ದೂರಿನ ಪ್ರಕಾರ ಪೋಲಿಸ್ ಅಧಿಕಾರಿ ದೂರನ್ನು ಸ್ವೀಕರಿಸಿ ಶ್ರೀಮತಿ ಎಸ್. ಲಾವಣ್ಯರವರ ಮೇಲೆ ಕೇಸು ದಾಖಲಿಸಿ ಕಾನೂನು ಪ್ರಕಾರವಾಗಿ ಸದ್ರಿ ಶ್ರೀಮತಿ ಎಸ್. ಲಾವಣ್ಯರವರನ್ನು ದಸ್ತಗಿರಿಮಾಡಿ ಮಂಗಳೂರು ದ.ಕ ಜಿಲ್ಲೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು
ಪಡಿಸಿದಾಗ ಮಾನ್ಯ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಿದರು.
ಕೇಸನ್ನು ವಿಚಾರಣೆಗೆ ಎತ್ತಿಕೊಂಡ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ ಎಸ್ ರವರು ಸಾಕ್ಷಿಗಳನ್ನು ವಿಚಾರಿಸಿ ವಾದವಿವಾದಗಳನ್ನು ಆಲಿಸಿ ಆರೋಪಿ ಶ್ರೀಮತಿ ಎಸ್. ಲಾವಣ್ಯರವರ ಮೇಲಿನ ಆರೋಪ ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂದು ಹೇಳಿ ಸದ್ರಿ ಆರೋಪಿ ಶ್ರೀಮತಿ ಎಸ್. ಲಾವಣ್ಯರವರನ್ನು ಆರೋಪ ಮುಕ್ತಗೊಳಿಸಿ ಕೇಸಿನಿಂದ ಬಿಡುಗಡೆಗೊಳಿಸಿದರು.
ಈ ಕೇಸಿನಲ್ಲಿ ಆರೋಪಿಯ ಪರವಾಗಿ ಹಿರಿಯ ನ್ಯಾಯವಾದಿ ಹಾಗೂ ಮುಖ್ಯ ಕಾನೂನು ನೆರವು ಅಭಿರಕ್ಷಕರಾದ (Chief Legal Aid Defense Counsel)ಶ್ರೀ ಜಿ ವಾಸುದೇವ ಗೌಡರವರು ವಾದಿಸಿದ್ದರು.