ವೃದ್ಧ ಮಾವನಿಗೆ ಥಳಿಸಿದ ಸೊಸೆ ಅರೆಸ್ಟ್

ಮಂಗಳೂರು: ತನ್ನ ವಯೋವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಹಲ್ಲೆ ನಡೆಸಿದ ಸೊಸೆಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಕುಲಶೇಖರ ನಿವಾಸಿ, ನಗರದ ಅತ್ತಾವರದ ಕೆಇಬಿ ಅಧಿಕಾರಿ ಉಮಾಶಂಕರಿ ಬಂಧಿತ ಆರೋಪಿತೆ.
ಉಮಾಶಂಕರಿ ತನ್ನ 87ವರ್ಷದ ವಯೋವೃದ್ಧ ಮಾವ ಪದ್ಮನಾಭ ಸುವರ್ಣ ಅವರಿಗೆ ವಾಕಿಂಗ್ ಸ್ಟಿಕ್ ನಿಂದ ಮನಸೋ ಇಚ್ಛೆ ಥಳಿಸಿ, ತಳ್ಳಿ ಸೋಫಾ ತಾಗಿ ಅವರು ಗಾಯಗೊಳ್ಳುವಂತೆ ಮಾಡಿದ್ದಳು. ಈ ಕೃತ್ಯದ ದೃಶ್ಯ ಮನೆಯೊಳಗಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ಈ ದೃಶ್ಯವನ್ನು ಗಮನಿಸಿ ಉಮಾಶಂಕರಿ ಪತಿ ಪ್ರೀತಂ ಸುವರ್ಣ ತನ್ನ ಸಹೋದರಿಗೆ ತಿಳಿಸಿದ್ದು, ಅವರು ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಉಮಾಶಂಕರಿ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸರು ಉಮಾಶಂಕರಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Latest Indian news

Popular Stories