ಮಂಗಳೂರು, ಫೆ.1: ಪಶ್ಚಿಮ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ ಡಾ.ಬೋರಲಿಂಗಯ್ಯ ಅವರನ್ನು ರಾಜ್ಯ ಸರಕಾರ ಫೆ.1ರ ಗುರುವಾರದಂದು ನೇಮಕ ಮಾಡಿದೆ.
ಪಶ್ಚಿಮ ವಲಯವು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದೆ.
2008ರ ಬ್ಯಾಚ್‌ಗೆ ಸೇರಿದ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ ಈ ನೇಮಕಕ್ಕೂ ಮುನ್ನ ಮೈಸೂರು ದಕ್ಷಿಣ ವಲಯದ ಐಜಿಪಿಯಾಗಿದ್ದರು. ಇದೀಗ ಮೈಸೂರಿನಲ್ಲಿ ಬೋರಲಿಂಗಯ್ಯ ಅವರ ಸ್ಥಾನಕ್ಕೆ ಅಮಿತ್ ಸಿಂಗ್ ನೇಮಕಗೊಂಡಿದ್ದಾರೆ