ಮಂಗಳೂರು: ತಿರುವನಂತಪುರಂ ಕಾಸರಗೋಡು ವಂದೇ ಭಾರತ್ ರೈಲು ಮಂಗಳೂರಿಗೂ ವಿಸ್ತರಣೆಗೊಂಡಿದ್ದು, ಮಂಗಳವಾರ ಉದ್ಘಾಟನಾ ಯಾತ್ರೆ ನಡೆಸಿದೆ.
ಮಂಗಳವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ನೂತನ ವಿಸ್ತೃತ ರೈಲು ಯಾತ್ರೆ ಆರಂಭಿಸಿತು.
ವಿಸ್ತೃತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿದ್ದರು.
ಮಂಗಳೂರಿನಿಂದ ಬೆಳಗ್ಗೆ 6:15ಕ್ಕೆ ಹೊರಡುವ ಈ ರೈಲು ಅಪರಾಹ್ನ 3:05ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4:05ಕ್ಕೆ ಹೊರಟು ರಾತ್ರಿ 12:40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನಗಳು ಈ ರೈಲು ಸೇವೆ ನೀಡಲಿದೆ.