ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ; ಅಗ್ನಿವಶದೊಳು ಅರಣ್ಯ ಸಂಪತ್ತು, ಪ್ರಾಣಿಸಂಕುಲ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹಲವು ಭಾಗಗಳು ಬೆಂಕಿಗಾಹುತಿ

ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿಯ ಹಲವು ಭಾಗಗಳು ಬೆಂಕಿಗಾಹುತಿಯಾಗಿದ್ದು, ವನ್ಯಜೀವಿ ವಿಭಾಗದ ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಒಣಗಿದ ಹುಲ್ಲಿಗೆ ಬೆಂಕಿ ಬಿದ್ದು, ಕಾಡ್ಗಿಚ್ಚು ಹಬ್ಬಿಕೊಂಡಿದ್ದು, ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ, ಅಗ್ನಿಶಾಮಕದಳ ಹರಸಾಹಸ ಪಡುತ್ತಿದೆ. ಶನಿವಾರ ಸಂಜೆಯಿಂದಲೇ ಕಾಡ್ಗಿಚ್ಚು ಪ್ರಾರಂಭಗೊಂಡಿದ್ದು, ಇನ್ನೂ ಹತೋಟಿಗೆ ಬಂದಿಲ್ಲ.

ಕುದುರೆಮುಖ ಪೀಕ್ ಕಡೆಯಿಂದ ಆರಂಭಗೊಂಡ ಬೆಂಕಿ, ನಾವೂರು ಗ್ರಾಮದ ತೊಳಲಿ ಏಳು ಸುತ್ತು ಎಂಬಲ್ಲಿಯವರೆಗೆ ವ್ಯಾಪಿಸಿದೆ. ಒಣಗಿದ ಹುಲ್ಲಿನ ಮೇಲೆ ವೇಗವಾಗಿ ಹರಡುತ್ತಿರುವ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿದೆ.

ಬೆಂಕಿ ಆವರಿಸಿಕೊಂಡಿರುವ ಭಾಗಕ್ಕೆ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲದಿರುವುದು, ಅಲ್ಲಿ ನೀರಿನ ಲಭ್ಯತೆ ಇಲ್ಲದಿರುವುದು ಕಾರ್ಯಾಚರಣೆಯನ್ನು ಮತ್ತಷ್ಟು ವಿಳಂಬ ಮಾಡಿದೆ.

Latest Indian news

Popular Stories