ದುಬೈಯಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನ ರದ್ದು: ಯಾಕೆ ಗೊತ್ತಾ?

ಮಂಗಳೂರು: ದುಬೈನಲ್ಲಿ ಭಾರೀ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಬುಧವಾರ ಮಂಗಳೂರಿಗೆ ಬರಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹಲವು ವಿಮಾನಗಳು ತನ್ನ ಹಾರಾಟವನ್ನು ಕ್ಯಾನ್ಸಲ್ ಮಾಡಿದೆ
ದುಬೈ-ಮಂಗಳೂರು (ಐಎಕ್ಸ್ 814), ದುಬೈ-ಮಂಗಳೂರು(ಐಎಕ್ಸ್ 384), ಮಂಗಳೂರು-ದುಬೈ (ಐಎಕ್ಸ್ 813) ಮತ್ತು ಮಂಗಳೂರು -ದುಬೈ (ಐಎಕ್ಸ್ 383), ತಿರುಚಿರಾಪಳ್ಳಿ-ಮಂಗಳೂರು ವಿಮಾನ(ಐಎಕ್ಸ್ 1499) ವಿಮಾನಗಳ ಹಾರಾಟ ರದ್ದಾಗಿದೆ.

ಮಂಗಳೂರು -ಜಿದ್ದಾ ವಿಮಾನ (ಐಎಕ್ಸ್ 796) ತಡವಾಗಿದೆ. ಗುರುವಾರ ಜಿದ್ದಾ-ಮಂಗಳೂರು (ಐಎಕ್ಸ್ 796), ಮಂಗಳೂರು -ತಿರುಚಿರಾಪಳ್ಳಿ(ಐಎಕ್ಸ್ 1498) ತಡವಾಗಿ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

Latest Indian news

Popular Stories