ಹರೇಕಳ: ನ್ಯೂಪಡ್ಪು ಮಸೀದಿ ತಡೆಗೋಡೆ ಕುಸಿತ- ತಪ್ಪಿದ ಅನಾಹುತ


ಮಂಗಳೂರು: ಹರೇಕಳ ಗ್ರಾಮದ ನ್ಯೂಪಡ್ಪುವಿನ ರಸ್ತೆಗೆ ತಾಗಿಕೊಂಡಿರುವ ತ್ವಾಹ ಜುಮಾ ಮಸೀದಿಯ ತಡೆಗೋಡೆ – ಕಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಆ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ, ಜನ ಸಂಚಾರವಿಲ್ಲದಿದ್ದರಿಂದ ಅನಾಹುತ ತಪ್ಪಿದೆ.


ಮಂಗಳವಾರದಿಂದ ಎಡೆಬಿಡದೇ ಸುರಿಯುತ್ತಿರುವ ಧಾರಕಾರ ಮಳೆಗೆ ತಡೆಗೋಡೆ ಗೋಡೆ ಶಿಥಿಲಗೊಂಡು ಇಂದು ರಾತ್ರಿ 8.45 ರ ಆಸುಪಾಸು ಸಮಯದಲ್ಲಿ ತಡೆಗೋಡೆ ಕುಸಿದು ಬಿದ್ದಿದೆ.
ಸ್ಥಳಕ್ಕೆ ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್, ಪಂಚಾಯತ್ ಸದಸ್ಯರಾದ ಬದ್ರುದ್ದೀನ್, ಅಬ್ದುಲ್ ಸತ್ತಾರ್, ಅಬ್ದುಲ್ ಬಶೀರ್ SM ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಈ ಸಂದರ್ಭದಲ್ಲಿ ತ್ವಾಹ ಜುಮಾ ಮಸ್ಜಿದ್ ಆಡಳಿತ ಕಮಿಟಿ ಮೊಹಲ್ಲಾದ ಯುವಕರೊಂದಿಗೆ ಸೇರಿಕೊಂಡು ರಸ್ತೆಯ ಅಡೆತಡೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಸೂಕ್ತ ಪರಿಹಾರಕ್ಕೆ ಮಸೀದಿ ಆಡಳಿತ ಕಮಿಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದೆ.

Latest Indian news

Popular Stories