ಪಕ್ಷದ ಮೇಲೆ ಸಿಟ್ಟಿದೆ ಎಂದು ನಾನು ಎಲ್ಲೂ ಹೇಳಿಲ್ಲ: ಸಿ.ಟಿ.ರವಿ

ಮಂಗಳೂರು: ನನಗೆ ಪಕ್ಷದ ಮೇಲೆ ಸಿಟ್ಟು ಇದೆ ಎಂದು ಈ ಹಿಂದೆ ಎಲ್ಲೂ ಹೇಳಿಲ್ಲ. ಕೆಲವೊಂದು ವಿಚಾರಗಳಿವೆ ಅದನ್ನು ಚುನಾವಣೆಯ ಸಂದರ್ಭದಲ್ಲಿ ಹೇಳುವುದಿಲ್ಲ. ಸೂಕ್ತ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದ್ದೇನೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.

ಮಂಗಳೂರಿನ ಲ್ಲಿ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆ ಬಳಿಕ ಕೆಲವು ವಿಷಯ ಹೇಳ್ತೀನಿ ಅಂದಿದ್ದು ಹೌದು. ಆದರೆ ಯಾವಾಗ ಅಂತ ಹೇಳಲಿಲ್ಲ, ಮುಂದೆ ನೋಡೋಣ ಎಂದು ಉತ್ತರಿಸಿದರು.
ಆದರೆ ನನಗೆ ಪಕ್ಷದ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ಅವರಿಲು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಸರ್ಕಾರ ಬಂದ ಈ 13 ತಿಂಗಳಲ್ಲಿ ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಹಿಂದಿನ ಎಲ್ಲಾ ರೆಕಾರ್ಡ್ ಬ್ರೇಕ್ ಆಗಿದೆ ಎಂದು ಆರೋಪಿಸಿದ ಸಿ.ಟಿ.ರವಿ, ಎನ್‌ಸಿಆರ್‌ಬಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ ಆದ ಹತ್ಯೆಯೇ 500ರ ಗಡಿ ದಾಟಿದೆ. ರೈತರ ಆತ್ಮಹತ್ಯೆ 700ರ ಗಡಿ ದಾಟಿದೆ. ಕೊಲೆ, ಸುಲಿಗೆ, ಭಯ ಇಲ್ಲದ ನಡವಳಿಕೆ ಕಂಡಾಗ ರಾಜ್ಯದಲ್ಲಿ ಕ್ರಿಮಿನಲ್ ಹಾಗೂ ಕಮ್ಯುನಲ್ ಎರಡೂ ಚಟುವಟಿಕೆಗಳು ಹೆಚ್ಚಳವಾಗಿದೆ. ಸರಕಾರ ಕ್ರಿಮಿನಲ್ ಗಳ ಪರವಾಗಿ ಮೃದುಧೋರಣೆ, ಕಮ್ಯುನಲ್ ಗಳ ಪರವಾಗಿ ಸ್ಪಷ್ಟ ನಿಲುವು ಹೊಂದಿರುವುದೇ ಈ ಸ್ಥಿತಿಗೆ ಕಾರಣ ಎಂದರು.

Latest Indian news

Popular Stories