ಪೊಲೀಸರು ಕಾನೂನು ಮೀರಿ ಹರೀಶ್ ಪೂಂಜಾ ಮೇಲೆ ಕ್ರಮ ಕೈಗೊಂಡರೆ ನಾವು ಸುಮ್ಮನಿರಲ್ಲ: ನಳಿನ್ ಕುಮಾರ್ ಕಟೀಲ್

ಬೆಳ್ತಂಗಡಿ: ಕಾರ್ಯಕರ್ತರ ಪರ ನಿಂತ ಶಾಸಕ ಹರೀಶ್ ಪೂಂಜಾ ರನ್ನು ಪೊಲೀಸರು ರಾಜಕೀಯ ಕುಮ್ಮಕ್ಕಿನಿಂದ ಬಂಧಿಸಲು ಹೊರಟಿದ್ದಾರೆ. ಆದರೆ ಅವರನ್ನು ಬಂಧಿಸ ತಕ್ಕಂತಹ ಯಾವುದೇ ಸೆಕ್ಷನ್ ಗಳು ಅವರ ಮೇಲೆ ದಾಖಲಾಗಿಲ್ಲ. ಆದರೂ ಪೊಲೀಸರು ಬಂಧಿಸುವ ಸಂಚು ರೂಪಿಸಿದ್ದರು. ಪೊಲೀಸರು ಕಾನೂನು ಮೀರಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಂಡರೆ ನಾವು ಸುಮ್ಮನಿರಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಬೆಳ್ತಂಗಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಲು ಹಠಕ್ಕೆ ಬಿದ್ದಿದೆ. ಇದರ ಹಿಂದೆ ರಾಜಕೀಯ ಪ್ರೇರಣೆ ಇದೆ. ಆದರೆ ಅವರು ಬಂಧಿಸುವಂತಹ ತಪ್ಪು ಮಾಡಿಲ್ಲ. ಅವರ ಅಪರಾಧ ಕಲಂಗೆ ಉತ್ತರ ಕೊಡಲು ಕಾಲಾವಕಾಶ ಕೊಟ್ಟರೆ ಅವರು ಅದಕ್ಕೆ ತನಿಖಾಧಿಕಾರಿಗೆ ಉತ್ತರ ಕೊಡುತ್ತಾರೆ ಎಂದು ನಳಿನ್ ಕುಮಾರ್ ಹೇಳಿದರು.


ರಾಜಕೀಯ ಜೀವನದಲ್ಲಿ ಹೋರಾಟ, ಪ್ರಕರಣ ದಾಖಲಾಗುವುದು ಸಹಜ. ನನ್ನ ಮೇಲೂ ಹಲವು ಪ್ರಕರಣಗಳಿವೆ. ಹಾಗಂತ ನನ್ನನ್ನು ಪೊಲೀಸರು ಬಂಧಿಸಿಲ್ಲ. ಆದರೆ ಕಾಂಗ್ರೆಸ್ ಸರಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ನಳಿನ್ ಕುಮಾರ್ ಆರೋಪಿಸಿದರು.

Latest Indian news

Popular Stories