ಸತ್ಯಜಿತ್ ಸುರತ್ಕಲ್ ಗೆ ಲೋಕಸಭೆ ಟಿಕೆಟ್ ನೀಡಲು ಒತ್ತಾಯಿಸಿ ಫೆ.25ರಂದು ಜನಾಗ್ರಹ ಸಮಾವೇಶ

ಮಂಗಳೂರು: ಹಿಂದೂ ಸಂಘಟನೆಯ ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಫೆ.25ರಂದು ಅಪರಾಹ್ನ 3 ಗಂಟೆಗೆ ತುಂಬೆಯ ಬಂಟರ ಭವನದಲ್ಲಿ ಜನಾಗ್ರಹ ಸಮಾವೇಶ ನಡೆಯಲಿದೆ.

ಸತ್ಯಜಿತ್ ಹಿಂದುತ್ವ, ಸಮಾಜಕ್ಕಾಗಿ 37 ವರ್ಷಗಳನ್ನು ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅವಕಾಶ ನೀಡಬೇಕು ಎಂದು ಟೀಂ ಸತ್ಯಜಿತ್ ಸುರತ್ಕಲ್ ನ ಸಂಚಾಲಕ ಅಚ್ಯುತ ಅಮೀನ್ ಕಲ್ಮಾಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸತ್ಯಜಿತ್ ಗೆ ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದವರು ಹೇಳಿದರು.

ಟೀಂ ಸತ್ಯಜಿತ್ ಸುರತ್ಕಲ್‌ನ ಸಂಚಾಲಕರಾದ ರವಿರಾಜ್ ಬಿ.ಸಿ.ರೋಡ್, ಸಂದೀಪ್‌ಶೆಟ್ಟಿ ಅಂಬ್ಲಮೊಗರು, ಭಾಸ್ಕರ್ ರಾವ್ ಬಾಳ, ಯಶ್ಪಾಲ್ ಸಾಲ್ಯಾನ್ ಚಿತ್ರಾಪುರ, ನಿತಿನ್ ಸುವರ್ಣ ಕೆಂಜಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories