ಕುವೈಟ್ ಅಗ್ನಿ ಅವಘಡ ಪ್ರಕರಣ: ಮೃತರಲ್ಲಿ ಇಬ್ಬರು ಕಾಸರಗೋಡಿನವರು

ಕಾಸರಗೋಡು: ಬುಧವಾರ ಬೆಳಗ್ಗೆ ಕುವೈತ್ ಸಿಟಿಯ ಮಂಗಾಫ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ 49 ಮಂದಿಯ ಪೈಕಿ ಇಬ್ಬರು ಕಾಸರಗೋಡಿನವರೆಂದು ತಿಳಿದು ಬಂದಿದೆ.


ಕಾಸರಗೋಡು ಜಿಲ್ಲೆಯ ಚೆಂಗಳದ ಕುಂಡಡ್ಕದ ರಂಜಿತ್ ಮತ್ತು ತೃಕರಿಪ್ಪೂರ್‌ನ ಕುಞಿಕೇಳು ಅಗ್ನಿ ಅವಘಡದಲ್ಲಿ ಮೃತಪಟ್ಟವರೆಂದು ತಿಳಿದು ಬಂದಿದೆ.


ಘಟನೆ ಸಂದರ್ಭದಲ್ಲಿ ರಕ್ಷಣೆ ಹೊಂದಲು ಶ್ರಮಿಸಿದ ತೃಕರಿಪ್ಪೂರ್‌ನ ಟಿ.ವಿ.ನಳಿನಾಕ್ಷ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿದೆ.


ಕುಂಡಡ್ಕದ ರವೀಂದ್ರ-ರಮಣಿ ದಂಪತಿಯ ಪುತ್ರ ರಂಜಿತ್ ಕಳೆದ 10 ವರ್ಷಗಳಿಂದ ಕುವೈತ್‌ನಲ್ಲಿ ಉದ್ಯೋಗ ಮಾಡಿತ್ತಿದ್ದರು. ಒಂದುವರೆ ವರ್ಷದ ಹಿಂದೆಯಷ್ಟೇ ಊರಿಗೆ ಬಂದು ನೂತನ ಮನೆಯ ಗೃಹ ಪ್ರವೇಶ ಮಾಡಿದ್ದರು.


ತೃಕರಿಪ್ಪೂರ್‌ನ ಕುಞಿಕೇಳು ಕಳೆದ 25 ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗ ದಲ್ಲಿದ್ದರು ಎಂದು ತಿಳಿದು ಬಂದಿದೆ. ಇವರಿಗೆ ಮೂವರು ಮಕ್ಕಳಿದ್ದಾರೆಂದು ತಿಳಿದುಬಂದಿದೆ.

Latest Indian news

Popular Stories