ಮಳಲಿ ಮಸೀದಿ ವಿವಾದ – ಅರ್ಜಿ ವಿಚಾರಣೆ ಫೆ.17ಕ್ಕೆ ಮುಂದೂಡಿಕೆ

ಮಂಗಳೂರು: ಮಳಲಿ ಮಸೀದಿಯ ಉತ್ಖನನ ಸರ್ವೇಗೆ ವಿಎಚ್ ಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದೆ.

ಈ ಕುರಿತು ವಿಎಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ಗುರುವಾರ ವಾದ ಮಂಡನೆ ಮಾಡಿದರು. ಮಸೀದಿ ಪರ ವಕೀಲರಿಂದ ಹೈಕೋರ್ಟ್ ತೀರ್ಪು ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಫೆ.17ಕ್ಕೆ ನ್ಯಾಯಾಲಯ ಮುಂದೂಡಿದೆ.

Latest Indian news

Popular Stories