ಮಂಗಳೂರು: 5 ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ: ಕಾರಣವೇನು ಗೊತ್ತಾ?

ಮಂಗಳೂರು: ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗೃಹ ವಾಸದ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವನ್ನು ನೀಡುವಂತೆ ಆದ್ದೇಶಿಸಿದೆ.
ಮಂಗಳೂರಿನ ರಾಮ್ ಭವನದಲ್ಲಿ ಕಾರ್ಯಾಚರಿಸುತ್ತಿರುವ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಪಾಲುದಾರಾರಾಗಿರುವ ಉಜ್ವಲ್ ಡಿಸೋಜ ಮತ್ತು ನವೀನ್ ಕಾರ್ಡೋಝಾ ಹಾಗೂ ಅವರೊಂದಿಗೆ ಡೆವೆಲಪ್‌ಮೆಂಟ್ ಪಾಲುದಾರಾರಾಗಿರುವ ವಿಲಿಯಂ ಸಾಲ್ದಾನ್ಹ, ಗಾಯತ್ರಿ, ಮತ್ತು ಲೂಸಿ ಸಾಲ್ದಾನ್ಹ ಶಿಕ್ಷೆಗೆ ಒಳಗಾದ ಆರೋಪಿಗಳು.

ಹಿನ್ನೆಲೆ:
ಆರೋಪಿಗಳು 2013ರಲ್ಲಿ ಮಂಗಳೂರಿನ ಗುಜ್ಜರೆ ಕೆರೆ ಎಂಬಲ್ಲಿ ಬಹುಮಹಡಿ ವಾಸದ ಕಟ್ಟಡ ಕಟ್ಟಿ ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಮಂಗಳೂರಿನ ಡಾ. ಲವೀನಾ ಅವರಿಂದ ಒಂದು ಫ್ಲಾಟ್ ಅನ್ನು ಕಾರ್ ಪಾರ್ಕಿಂಗ್ ಸಹಿತ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಹಣ ಪಡೆದ ಬಳಿಕ ಮಾರಾಟ ಪತ್ರ ವನ್ನು ಲವೀನಾ ಇವರಿಗೆ ಬರೆದು ಕೊಟ್ಟಿದ್ದರು. ಆದರೆ ಮಾರಾಟ ಪತ್ರದಲ್ಲಿ ತಿಳಿಸಿರುವಂತೆ ಆರೋಪಿಗಳು ಕಾರ್ ಪಾರ್ಕಿಂಗ್ ನೀಡಿರಲಿಲ್ಲ. ಆರೋಪಿಗಳನ್ನು ಭೇಟಿ ಮಾಡಿ ಕಾರ್ ಪಾರ್ಕಿಂಗ್ ಒದಗಿಸುವತೆ ವಿನಂತಿಸಿದಾಗ, ಆರೋಪಿಗಳು ನಿರಾಕರಿಸಿದರು. ಆ ಕಾರಣದಿಂದ ಲವೀನಾ ರವರು ನೋಟಿಸ್ ನೀಡಿದರು. ಆದರೆ ಕಾರ್ ಪಾರ್ಕಿಂಗ್ ಸಿಕ್ಕಿರಲಿಲ್ಲ.
ಕೊನೆಗೆ ಲವೀನಾ 2014 ರಲ್ಲಿ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಆರೋಪಿಗಳು ತನ್ನಿಂದ ಹಣ ಪಡೆದ ಹೊರತಾಗಿಯೂ ತನಗೆ ಫ್ಲಾಟ್ ನಲ್ಲಿ ಕಾರ್ ಪಾರ್ಕಿಂಗ್ ಒದಗಿಸಿಲ್ಲ ಮತ್ತು ಕಾರ್ ಪಾರ್ಕಿಂಗ್ ಒದಗಿಸುವಂತೆ ನಿರ್ದೇಶನ ನೀಡುವಂತೆ ದೂರು ಸಲ್ಲಿಸಿದರು.
ಗ್ರಾಹಕ ನ್ಯಾಯಾಲಯ ಲವೀನಾ ರವರ ದೂರನ್ನು ವಿಚಾರಣೆಗೆ ತೆಗೆದುಕೊಂಡು ದಿನಾಂಕ 24-06-2017 ರಲ್ಲಿ ಅಂತಿಮ ತೀರ್ಪುನ್ನು ಪ್ರಕಟಿಸಿ ಆರೋಪಿಗಳು ಸೇವಾ ನ್ಯೂನ್ತೆ ಮಾಡಿದ್ದಾರೆ. ಅವರು ದೂರುದಾರರಿಗೆ ಕಾರ್ ಪಾರ್ಕಿಂಗ್ ಮತ್ತು 50,000/ ಪರಿಹಾರ ಹಾಗೂ 10000/ ಪ್ರಕರಣದ ಬಾಬ್ತು ಖರ್ಚನ್ನು ನೀಡುವಂತೆ ಆದೇಶಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ಆರೋಪಿಗಳ ಮನವಿಯನ್ನು ತಿರಸ್ಕರಿಸಿ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಇದರ ಹೊರತಾಗಿಯೂ ಆರೋಪಿಗಳು ದೂರುದಾರರಿಗೆ ಕಾರ್ ಪಾರ್ಕಿಂಗ್ ಕೊಡಲಿಲ್ಲ.

ಹೀಗಾಗಿ ದೂರುದಾರರು ಸೆಪ್ಟೆಂಬರ್ 2022 ಕ್ಕೆ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆರೋಪಿಗಳು ತನಗೆ ಕಾರ್ ಪಾರ್ಕಿಂಗ್ ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಹಿಸಿದ್ದಾರೆ. ಆರೋಪಿಗಳು ನ್ಯಾಯಾಲಯದ ಆದೇಶದಂತೆ ಕಾರ್ ಪಾರ್ಕಿಂಗ್ ನೀಡದ ಕಾರಣ ಅವರಿಗೆ ಗ್ರಾಹಕ ರಕ್ಷಣಾ ಕಾಯ್ದೆ 2019 ರ ಅನ್ವಯ ಮೂರು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವನ್ನು ವಿಧಿಸ ಬೇಕಾಗಿ ವಿನಂತಿಸಸಿದ್ದರು.

ದೂರು ದಾರರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ, ಆರೋಪಿಗಳು ತನ್ನ ಆದೇಶವನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮೂರು ವರ್ಷ ಕಾರಾಗೃಹ ಸಜೆ ಮತ್ತು ತಲಾ ಒಂದು ಲಕ್ಷದಂತೆ ದಂಡ ವನ್ನು ಪಾವತಿಸುವಂತೆ ಆದೇಶಿಸಿದೆ.

Latest Indian news

Popular Stories