Manglore | ಮೊಬೈಲ್‌ ನೋಡುತ್ತಲೇ ಮಹಡಿಯಿಂದ ಬಿದ್ದ ಬಾಲಕ ಮೃತ್ಯು

ಮಂಗಳೂರು: ಮೊಬೈಲ್ ನೋಡುತ್ತಾ ಮನೆಯ ಮೇಲಿನ ಮಹಡಿಯಿಂದ ಕೆಳಗೆಬಿದ್ದ 15ರ ಬಾಲಕ ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ಆದಿಶ್ ಮೃತಪಟ್ಟ ಬಾಲಕ. ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿಶ್ ಇತ್ತೀಚಿಗಷ್ಟೇ ಪರೀಕ್ಷೆ ಮುಗಿದು ಮನೆಯಲ್ಲೇ ಇದ್ದ.

ಆದಿಶ್ ಗೆ ಮೊಬೈಲ್ ಗೀಳು ಇದ್ದು, ಆತ ಸದಾ ಮೊಬೈಲ್ ನಲ್ಲೇ ಮುಳುಗಿರುತ್ತಿದ್ದನಂತೆ. ಆತ ತನ್ನ ಮನೆಯವರಿಗೆ ಗೊತ್ತಿಲ್ಲದಂತೆ ಮೊಬೈಲ್ ಹಿಡಿದುಕೊಂಡು ಮನೆ ಮೇಲೆ ಹೋಗಿದ್ದಾನೆ. ಈ ವೇಳೆ ಆಯತಪ್ಪಿ ಮನೆಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಬೆಳಗ್ಗೆ ಎದ್ದು ಹೊರಗೆ ಬಂದಾಗ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಆತ ಮೇಲಿಂದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಿದ್ದಿರುವುದು ಕಂಡುಬಂದಿದೆ.

Latest Indian news

Popular Stories