ಮಂಗಳೂರು: ವಿದ್ಯುತ್ ತಂತಿ ಮೇಲೆ ಮರ ಬಿದ್ದು ರೈಲು ಸಂಚಾರ ಸ್ಥಗಿತ

ಮಂಗಳೂರು: ವಿದ್ಯುತ್ ಸಂಚಾರದ ತಂತಿ ಮೇಲೆ ಮರ ಬಿದ್ದು ತಂತಿ ತುಂಡಾದ ಹಿನ್ನೆಲೆಯಲ್ಲಿ ರೈಲೊಂದರ ಸಂಚಾರ ಕೆಲಹೊತ್ತು ಸ್ಥಗಿತಗೊಂಡ ಘಟನೆ ಮಂಗಳೂರು ಜೋಕಟ್ಟೆ ರೈಲು ಹಳಿಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಮರವೊಂದು ತುಂಡಾಗಿ ಬಿದ್ದು, ವಿದ್ಯುತ್ ತಂತಿಗಳು ಸಂಪರ್ಕ ಕಳೆದುಕೊಂಡಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ರೈಲ್ವೇ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Latest Indian news

Popular Stories