ಮಂಗಳೂರು: ಸಾಲ ನೀಡಿದ ಹಣವನ್ನು ವಾಪಸ್ ಕೇಳಿದ್ದಕ್ಕೆ ವಿವಾಹಿತ ಮಹಿಳೆಗೆ ಬಿಜೆಪಿ ಕಾರ್ಯಕರ್ತ ಎನ್ನಲಾದವನು ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ಯಲ್ಲಿ ನಡೆದಿದೆ.
ಬಟ್ಟೆಶಾಪ್‌ಗೆ ನುಗ್ಗಿ ವಿವಾಹಿತೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉಜಿರೆಯಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಜೆಪಿ ಕಾರ್ಯಕರ್ತ, ಹೂವಿನ ವ್ಯಾಪಾರಿ ನವೀನ್ ಕನ್ಯಾಡಿನಿಂದ ಕೃತ್ಯ ಎಸಗಿರುವ ಆರೋಪಿ ಎನ್ನಲಾಗಿದ್ದು, ಧರ್ಮಸ್ಥಳ ನಿವಾಸಿ ರೂಪಾ ಎಂಬವರು ಹಲ್ಲೆಗೊಳಗಾದ ಮಹಿಳೆ.
ನವೀನ್‌ಗೆ 7 ಲಕ್ಷ ರೂ. ಸಾಲ ನೀಡಿದ್ದ ರೂಪಾ, ಅದನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ರೂಪಾ ಉಜಿರೆಯಲ್ಲಿ ಬಟ್ಟೆಶಾಪ್ ಹೊಂದಿದ್ದರು. ಎರಡು ದಿನಗಳ ಹಿಂದೆ ಏಕಾಏಕಿ ಅವರ ಬಟ್ಟೆಶಾಪ್‌ಗೆ ನುಗ್ಗಿ ನವೀನ್ ಕನ್ಯಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೆ ಅವರ ಮೊಬೈಲ್ ಅನ್ನು ಕಿತ್ತುಕೊಳ್ಳುವುದು ದೃಶ್ಯದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.