ಮಂಗಳೂರು: ಮತ್ತೆ 10ಮಂದಿ ರೌಡಿಶೀಟರ್ ಗಳ ಗಡೀಪಾರು


ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ತೊಡಗಿಸಕೊಂಡಿದ್ದ 10 ಮಂದಿ ರೌಡಿಶೀಟರ್‌ಗಳನ್ನು ಗಡೀಪಾರು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಡೀಪಾರು ಮಾಡಲಾಗಿದೆ ಎಂದು ಪೊಲೀಸ್ ಕಮಿಷನ್ ತಿಳಿಸಿದ್ದಾರೆ.

ಕಸ್ಬಾ ಬೆಂಗ್ರೆಯ ಮಹಮ್ಮದ್ ಸುಹೈಲ್(21), ಕಣ್ಣೂರು ಕೊಡಕ್ಕಲ್ ನ ನಿಕ್ಷಿತ್ ಪೂಜಾರಿ(21), ಉಳ್ಳಾಲ ಸೋಮೇಶ್ವರದ ಸುನಿಲ್(24), ಕುದ್ರೋಳಿ ಜಿ.ಟಿ.ರೋಡ್ ನ ಲತೀಶ್ ನಾಯಕ್(34), ಉಳ್ಳಾಲ ಬಸ್ತಿಪಡ್ಪುವಿನ ಯತೀಶ್(46), ಮುಲ್ಕಿ ಲಿಂಗಪ್ಪಕಾಡುವಿನ ದಾಮಲಿಂಗ(34), ಕಣ್ಣೂರಿನ ಮಹಮ್ಮದ್ ಹನೀಝ್(32), ಚಿತ್ರಾಪುರದ ತೇಜಪಾಲ್ ಆರ್ ಕುಕ್ಯಾನ್(40), ವಾಮಂಜೂರು ಉಳಾಯಿಬೆಟ್ಟುವಿನ ಮಹಮ್ಮದ್ ಅನ್ಸಾರ್(31), ಪಾಂಡೇಶ್ವರ ಶಿವನಗರದ ಅಭಿಷೇಕ್ (29) ಗಡೀಪಾರು ಆಗಿರುವ ಆರೋಪಿಗಳು.

ಈ 10ಮಂದಿ ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ. ಮಂಗಳವಾರ 19 ರೌಡಿ ಶೀಟರ್‌ಗಳ ವಿರುದ್ಧ ಗಡೀಪಾರು ಆದೇಶ ಮಾಡಲಾಗಿದ್ದರೆ, ಈ ತಿಂಗಳ ಆರಂಭದಲ್ಲಿ 7ಮಂದಿಯ ವಿರುದ್ಧ ಗಡೀಪಾರು ಆದೇಶ ಹೊರಡಿಸಲಾಗಿತ್ತು.

Latest Indian news

Popular Stories