ಮಂಗಳೂರು: ಮೊದಲ ಮಳೆಗೇ ಜೀವಬಲಿ; ತೋಡಿಗೆ ಆಟೊರಿಕ್ಷಾ ಉರುಳಿ ಚಾಲಕ ಮೃತ್ಯು

ಮಂಗಳೂರು: ಮೊದಲ ಮಳೆಗೇ ನಗರದಲ್ಲಿ ಜೀವಹಾನಿ ಸಂಭವಿಸಿದ್ದು, ಆಟೋ ರಿಕ್ಷಾ ತೋಡಿಗೆ ಉರುಳಿ ಚಾಲಕ ಮೃತಪಟ್ಟ ಘಟನೆ ಕೊಟ್ಟಾರದಲ್ಲಿ ನಡೆದಿದೆ.

ಆಟೋಚಾಲಕ ಸ್ಥಳೀಯ ನಿವಾಸಿ ಆಟೊಚಾಲಕ ದೀಪಕ್ (40) ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿನ ತೋಡಿನ ಭರ್ತಿ ನೀರು ತುಂಬಿ ಹರಿದಿದೆ. ರಸ್ತೆಯನ್ನೂ ಮೀರಿ ನೀರು ಹರಿಯುತ್ತಿದ್ದ ಪರಿಣಾಮ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾ ಉರುಳಿ ತೋಡಿಗೆ ಬಿದ್ದಿದೆ‌. ತೋಡು ಭರ್ತಿ ನೀರಿದ್ದ ಪರಿಣಾಮ ರಿಕ್ಷಾ ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ತೋಡಿಗೆ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಭಾರೀ ಅನಾಹುತ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ‌.

Latest Indian news

Popular Stories