ಮಂಗಳೂರು: ಕುಮಾರಸ್ವಾಮಿಗಿಂತ 10 ವರ್ಷ ಮೊದಲೇ ರಾಜಕೀಯಕ್ಕೆ ಬಂದಿದ್ದೇನೆ – ಡಿ.ಕೆ.ಶಿವಕುಮಾರ್

ಮಂಗಳೂರು: ನಾನು ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲವೆಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ನಾನು 1985ರಲ್ಲಿ ಚುನಾವಣೆ ಎದುರಿಸಿದ್ದೇನೆ. ಅವರು 1995ರಲ್ಲಿ ಚುನಾವಣೆ ಎದುರಿಸಿದ್ದು. ಅವರಿಗಿಂತ 10 ವರ್ಷ ಮೊದಲೇ ನಾನು ಚನ್ನಪಟ್ಟಣ ನೋಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಹೇಳಿದರು.

ಚನ್ನಪಟ್ಟಣ ದಲ್ಲಿ ತಮ್ಮ ಡಿ.ಕೆ. ಸುರೇಶ್ ಸ್ಪರ್ಧಿಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Latest Indian news

Popular Stories