ಮಂಗಳೂರು: 19 ರೌಡಿ ಶೀಟರ್‌ಗಳ ವಿರುದ್ಧ ಗಡೀಪಾರು ಆದೇಶ ಹೊರಡಿಸಿದ ಪೊಲೀಸ್ ಕಮಿಷನರ್

ಮಂಗಳೂರು: ಲೋಕಸಭಾ ಚುನಾವಣೆಯ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು 19 ಮಂದಿ ರೌಡಿಶೀಟರ್‌ಗಳನ್ನು ಗಡೀಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ ಮೂಡುಬಿದಿರೆಯ ಅತ್ತೂರು ನಸೀಬ್ (40), ಕಾಟಿಪಳ್ಳದ ಶ್ರೀನಿವಾಸ್ ಎಚ್. (24), ಬಜ್ಪೆ ಶಾಂತಿಗುಡ್ಡದ ಮುಹಮ್ಮದ್ ಸಫ್ವಾನ್ (28), ಬೋಂದೆಲ್‌ನ ಜಯೇಶ್ ಯಾನೆ ಸಾಚು (28), ನೀರುಮಾರ್ಗದ ಭಟ್ರಕೋಡಿಯ ವರುಣ್ ಪೂಜಾರಿ (30), ಅಶೋಕ ನಗರದ ಮುಹಮ್ಮದ್ ಅಝೀಝ್ (40), ಕಾವೂರಿನ ಮುಹಮ್ಮದ್ ಇಶಾಮ್ (30), ಸುರತ್ಕಲ್ ಇಡ್ಯಾದ ಕಾರ್ತಿಕ್ ಶೆಟ್ಟಿ (28), ಕೈಕಂಬ-ಗಣೇಶ್‌ಪುರದ ದೀಕ್ಷಿತ್ ಪೂಜಾರಿ (23), ಕೃಷ್ಣಾಪುರದ ಲಕ್ಷ್ಮೀಶ ಉಳ್ಳಾಲ (27),ಬೊಂಡಂತಿಲದ ಕಿಶೋರ್ ಸನಿಲ್ (36), ಉಳ್ಳಾಲ ಕೋಡಿಯ ಹಸೈನಾರ್ ಸೈಯದ್ ಅಲಿ (38), ಕುದ್ರೋಳಿ ಕರ್ಬಲಾ ರಸ್ತೆಯ ಅಬ್ದುಲ್ ಜಲೀಲ್ (28), ಬೋಳೂರಿನ ರೋಶನ್ ಕಿಣಿ (18), ಕಸಬಾ ಬೆಂಗರೆಯ ಅಹ್ಮದ್ ಸಿನಾನ್ (21), ಜಪ್ಪಿನಮೊಗರಿನ ದಿತೇಶ್ ಕುಮಾರ್ (28), ಬಜಾಲ್ ಕುತ್ತಡ್ಕದ ಗುರುಪ್ರಸಾದ್ (38) ಮತ್ತು ಭರತ್ ಪೂಜಾರಿ (31), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (37) ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಈ ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಾಂತಿಯುತ ಚುನಾವಣೆಯನ್ನು ನಡೆಸುವ ಸಲುವಾಗಿ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ.

Latest Indian news

Popular Stories