ಮಂಗಳೂರು: ಜೈಲಿನಲ್ಲಿ ಖೈದಿಗಳ ಮಾರಾಮಾರಿ; ಇಬ್ಬರಿಗೆ ಗಾಯ

ಮಂಗಳೂರು: ನಗರದ ಕಾರಾಗೃಹದಲ್ಲಿ ಖೈದಿಗಳ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ವಿಚಾರಣಾಧೀನ ಖೈದಿಗಳು ಗಾಯಗಳೊಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಉಳ್ಳಾಲದ ಮುಹಮ್ಮದ್ ಸಮೀರ್ ಮತ್ತು ಬೋಳಿಯಾರ್ ಮನ್ಸೂರ್ ಘಟನೆಯಲ್ಲಿ ಗಾಯಗೊಂಡು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಸಮೀರ್ ಮತ್ತು ಮನ್ಸೂರ್ ವಿರುದ್ಧ ಸಹ ಖೈದಿಗಳಾದ ಟೋಪಿ ನೌಫಲ್ ಮತ್ತು ಆತನ ಸಹಚರರು ಚಮಚಾ ಮತ್ತಿತರ ಉಪಕರಣಗಳಿಂದ ಹಲ್ಲೆ ನಡೆಸಿದ್ದು, ಅವರ ತಲೆ, ಭುಜ,ಮುಖದ ಮೇಲೆ ಗಾಯಗಳಾಗಿವೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದಾರೆ.


ಸಮೀರ್ ಮತ್ತು ಮನ್ಸೂರ್ ಉಳ್ಳಾಲ ಠಾಣೆಯಲ್ಲಿ ರೌಡಿಶೀಟರ್‌ಗಳಾಗಿದ್ದು, ಅವರ ವಿರುದ್ಧ ಹಲವು ಗಂಭೀರ ಪ್ರಕರಣಗಳಿವೆ.


ಹಲ್ಲೆ ನಡೆಸಿದ ತಂಡದಲ್ಲಿ ಟೋಪಿ ನೌಫಲ್, ರಿಫಾತ್, ರಿಝ್ವಾನ್, ಇಬ್ರಾಹಿಂ ಖಲೀಲ್, ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಝೈನುದ್ದೀನ್ ಮತ್ತಿತರರು ಇದ್ದರೆಂದು ಪೊಲೀಸರು ತಿಳಿಸಿದ್ದಾರೆ.


ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories