ಮಂಗಳೂರು: ಮಣ್ಣು ಕುಸಿತದಿಂದ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

ಮಂಗಳೂರು: ಬುಧವಾರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿದು ಸಾವನ್ನಪ್ಪಿದ ಕಾರ್ಮಿಕ ಚಂದನ್ ಕುಮಾರ್ ಕುಟುಂಬಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಎರಡು ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದೆ.

ಜಿಲ್ಲಾಡಳಿತ ಮುತುವರ್ಜಿಯಿಂದ ಗುರುವಾರವೇ ಮಂಡಳಿಯು ಮೃತ ಕಾರ್ಮಿಕರ ಪತ್ನಿ ಕಿರಣ ದೇವಿ ಅವರಿಗೆ ಎರಡು ಲಕ್ಷ ರೂ. ಚೆಕ್ ಕಳುಹಿಸಿದೆ.

ಇದರೊಂದಿಗೆ ಕಟ್ಟಡ ನಿರ್ಮಾಣದ ಗುತ್ತಿಗೆದಾರರೂ ಎರಡು ಲಕ್ಷ ರೂ. ಪರಿಹಾರವನ್ನು ನೀಡಿದ್ದಾರೆ.

ಇದಲ್ಲದೇ, ಕಾರ್ಮಿಕ ಪರಿಹಾರ ಕಾಯಿದೆಯಡಿಯಲ್ಲಿಯೂ ಮೃತ ಕಾರ್ಮಿಕರ ಕುಟುಂಬಕ್ಕೆ ವಿಮಾ ಮೊತ್ತ ದೊರಕಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories