ಮಂಗಳೂರು: ರಸ್ತೆಯಲ್ಲಿ ನಮಾಝ್ ಮಾಡಿದವರ ವಿರುದ್ಧ ಸುಮೊಟೊ ಪ್ರಕರಣ ದಾಖಲು

ಮಂಗಳೂರು: ಕಂಕನಾಡಿ ಮಸೀದಿಯ ಬಳಿಯ ರಸ್ತೆಯಲ್ಲಿ ಕಳೆದ ಶುಕ್ರವಾರದ ನಮಾಝ್ ಮಾಡಿದ್ದಾರೆ ಎನ್ನಲಾದ ವೀಡಿಯೋ ಒಂದು ವೈರಲ್ ಆಗಿದ್ದು, ವೈರಲ್ ವೀಡಿಯೋದ ಆಧಾರದಲ್ಲಿ ಅಪರಿಚಿತರ ವಿರುದ್ಧ ಮಂಗಳೂರು ಪೂರ್ವ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.

ಘಟನೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಸೆಕ್ಷನ್ 341, 283, 143 ಮತ್ತು 149 ಐಪಿಸಿಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories