Manglore | ತೋಟಬೆಂಗ್ರೆ; ಸಮುದ್ರಕ್ಕೆ ಬಿದ್ದು ಬಾಲಕ ಮೃತ್ಯು

ಪಣಂಬೂರು: ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಬಾಲಕನೋರ್ವ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾನೆ.

ತೋಟಬೆಂಗ್ರೆ ಮಿಥುನ್‌ ಎಂಬವರ ಪುತ್ರ ಪ್ರಜೀತ್‌ (15) ಮೃತ ಬಾಲಕ. ದೋಣಿಯಲ್ಲಿ ತೆರಳುತ್ತಿದ್ದಾಗ ಬಾಲಕ ನೀರಿಗೆ ಬಿದ್ದಿದ್ದಾನೆ.

ಮೀನುಗಾರರು ರಕ್ಷಣೆಗಾಗಿ ತತ್‌ಕ್ಷಣ ಕಾರ್ಯಾಚರಣೆ ನಡೆಸಿದರೂ ತೆರೆಗಳ ನಡುವೆ ಸಿಲುಕಿದ ಆತನನ್ನು ಪತ್ತೆ ಮಾಡುವಾಗ ಒಂದು ತಾಸು ವಿಳಂಬವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದ. ಈ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories