ಮಂಗಳೂರು: ಮನೆಮಂದಿಯ ಕಟ್ಟಿ ಹಾಕಿ ದರೋಡೆ

ಮಂಗಳೂರು: ಮನೆ ಮಂದಿಯನ್ನೆಲ್ಲಾ ಕಟ್ಟಿಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಉಳಾಯಿಬೆಟ್ಟುವಿನಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ 8ರಷ್ಟು ಜನರಿದ್ದ ತಂಡ ಉಳಾಯಿಬೆಟ್ಟಿನ ಕಾಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಮನೆಗೆ ಪ್ರವೇಶಿಸಿದ್ದು, ಮನೆ ಮಂದಿಯನ್ನು ಚಾಕು ತೋರಿಸಿ ಬೆದರಿಸಿದಲ್ಲದೇ, ಬೆಡ್‌ಶೀಟ್‌ನಿಂದ ಅವರನ್ನು ಕಟ್ಟಿಹಾಕಿ ಮನೆಯಲ್ಲಿ ದ್ದ ಚಿನ್ನಾಭರಣ ಮತ್ತು ಹಣವನ್ನು ದರೋಡೆ ಮಾಡಿದ್ದಾರೆಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಪದ್ಮನಾಭ ಕೋಟ್ಯಾನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG 20240622 WA0029 Dakshina Kannada IMG 20240622 WA0027 Dakshina Kannada IMG 20240622 WA0028 Dakshina Kannada

Latest Indian news

Popular Stories