ಎನ್ ಅಮೀನ್ ಪಕ್ಕಲಡ್ಕ ರವರ ಆನೆ ಬಂತೊಂದಾನೆ ಕಥಾ ಸಂಕಲನ ಬಿಡುಗಡೆ

ಕೊಣಾಜೆ : ಮಂಗಳೂರಿನ ಹಿರಿಯ ಬರಹಗಾರರು ಭಾರತ್ ಸೋಷಿಯಲ್ ವೆಲ್ಫೇರ್ ಆಂಡ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರಾದ ಎನ್ ಎನ್. ಅಮೀನ್ ಪಕ್ಕಲಡ್ಕ ರವರ ಮೊದಲ ಕಥಾ ಸಂಕಲನ “ಆನೆ ಬಂತೊಂದಾನೆ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆಯಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನದಂದು ಕುಲಸಚಿವರಾದ ಶ್ರೀ ರಾಜು ಮೊಗವೀರ ಕೆ.ಎ.ಎಸ್ ರವರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಪ್ರಭಾಕರ ಶಿಶಿಲ ರವರು ನಿರ್ವಹಿಸಿದರು.
ಕಸಾಪ ದ.ಕ ಜಿಲ್ಲಾ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್ ಮಂಗಳೂರು ಮಹಿಳಾ ಸಭಾ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಬಿ ಶೆಟ್ಟಿ, ಪ್ರಕಾಶಕರಾದ ಕೊಲ್ಲೂರು ನಾಗೇಶ್, ಕಸಾಪ ದ.ಕ ಜಿಲ್ಲಾ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್, ಉಳ್ಳಾಲ ತಾಲೂಕು ಅಧ್ಯಕ್ಷರಾದ ಪ್ರೊಫೆಸರ್ ಧನಂಜಯ ಕುಂಬ್ಳೆ, ಪ್ರೊ. ಮೋಹನ್ ಕುಂಟಾರ್, ಪ್ರೊ. ಸೋಮಣ್ಣ ಹೊಂಗಳ್ಳಿ, ಸ್ಮಿತಾ ಅಮೃತ ರಾಜ್ ಸಂಪಾಜೆ, ರೇಣುಕಾ ಸುಧೀರ್ ಅರಸಿನಮಕ್ಕಿ, ಪುಸ್ತಕ ಬಿಡುಗಡೆ ಸಮಿತಿಯ ಸಂಚಾಲಕ ಅಶೀರುದ್ದೀನ್ ಸಾರ್ತಬೈಲ್ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಸಾಪ ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಪುಷ್ಪರಾಜ್ ಕೆ ಕಾರ್ಯಕ್ರಮ ನಿರೂಪಿಸಿದರು.