ರಸ್ತೆಯಲ್ಲಿ ನಮಾಜ್ ಪ್ರಕರಣ:ವೀಡಿಯೋ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಾಗಲಿ: ರಮಾನಾಥ ರೈ

ಮಂಗಳೂರು: ಸಣ್ಣ ವಿಚಾರವೊಂದನ್ನು ವೀಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದಲ್ಲಿ ಅಶಾಂತಿ ಗೆ ಕಾರಣರಾದವರ ವಿರುದ್ಧವೂ ಪ್ರಕರಣ ದಾಖಲಾಗಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮತೀಯವಾದ, ಬಹುಸಂಖ್ಯಾತ ಮತೀಯವಾದ ಎರಡನ್ನೂ ಕಾಂಗ್ರೆಸ್ ಒಪ್ಪುವುದಿಲ್ಲ. ರಸ್ತೆಯಲ್ಲಿ ನಡೆದ ನಮಾಜ್ ವಿಚಾರವನ್ನು ದೊಡ್ಡದು ಮಾಡಿರುವುದು ಸರಿಯಲ್ಲ. ಮಸೀದಿಯೊಳಗಡೆ ಸ್ಥಳಾವಕಾಶವಿಲ್ಲವೆಂದು ಹೊರಗಡೆ ನಮಾಜ್ ಮಾಡಿರಬಹುದು. ಸಣ್ಣ ಸಮಸ್ಯೆಯನ್ನು ಇಷ್ಟೊಂದು ರಂಪಾಟ ಮಾಡಬೇಕೆಂದೇನಿಲ್ಲ. ಇದಕ್ಕಿಂತಲೂ ಪ್ರಚೋದನಾಕಾರಿ ಘಟನೆಗಳು ನಡೆದಿದೆ. ಪ್ರಚೋದನಾಕಾರಿ ಮಾತುಗಳು ಕೇಳಿ ಬಂದಿದೆ. ಅದರ ಮೇಲೆ ಎಲ್ಲೂ ಸುಮೋಟೊ ಕೇಸ್ ದಾಖಲಾಗಿಲ್ಲ. ಅಲ್ಲಿ ಪ್ರಾರ್ಥನೆ ಅಷ್ಟೇ ನಡೆದಿರೋದು. ಯಾವುದೇ ಅನಾಗರಿಕ ಕೆಲಸಗಳೇನು ನಡೆದಿಲ್ಲ. ಏನೋ ವ್ಯತ್ಯಾಸ ಆಗಿರೋದನ್ನು ಸರಿಪಡಿಸುವ ಕೆಲಸ ನಾವು ಮಾಡಬೇಕಿದೆ ಎಂದು ರಮಾನಾಥ ರೈ ಹೇಳಿದರು.

Latest Indian news

Popular Stories