ನೇತ್ರಾವತಿ ನದಿಗೆ ಈಜಲು ಹೋದ ಬಾಲಕ ನೀರುಪಾಲು

ದ.ಕ : ಬಂಟ್ವಾಳದ ನೇತ್ರಾವತಿ ನದಿಗೆ ಈಜಲು ಹೋದ ಹದಿಮೂರು ವರ್ಷದ ಬಾಲಕ ನೀರು ಪಾಲಗಿದ್ದಾನೆ.

ಮೃತ ಬಾಲಕನನ್ನು ನೆಚ್ಚಬೆಟ್ಟುವಿನ ಸುಹೈಲ್ (13) ಎಂದು ಗುರುತಿಸಲಾಗಿದೆ. ಈತ 7 ನೇ ತರಗತಿ ವಿದ್ಯಾರ್ಥಿ.

ಮನೆ ಸಮೀಪದ ಮದುವೆಯೊಂದಕ್ಕೆ ಹೋಗಿ ಈಜಲು ಹೋಗಿದ್ದ ಸಂದರ್ಭದಲ್ಲಿ ದುರ್ಘಟನೆ ಘಟಿಸಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories