ಪಾರ್ಟಿ ಗುಡಿಸು ಎಂದರೆ ಗುಡಿಸುತ್ತೇವೆ…. ಒರಸು ಅಂದರೆ ಒರಸುತ್ತೇವೆ: ನಳಿನ್ ಕುಮಾರ್ ಹೀಗೆ ಹೇಳಿದ್ಯಾಕೆ

ಮಂಗಳೂರು: ನಾವೆಲ್ಲಾ ರಾಷ್ಟ್ರೀಯ ನಾಯಕರ ಯೋಚನೆಗಳಿಗೆ ಬದ್ಧರಾಗಿ ಕೆಲಸ ಮಾಡುವವರು. ಹಾಗಾಗಿ ಪಾರ್ಟಿ ಗುಡಿಸು ಎಂದರೆ ಗುಡಿಸುತ್ತೇವೆ…. ಒರಸು ಅಂದರೆ ಒರಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಪಾರ್ಟಿ ಹೇಳಿದಂತೆ ಕೇಳುವವರು. ನಾವು ಇರುವುದೇ ಪಾರ್ಟಿ ಕೆಲಸ ಮಾಡಲು ಎಂದರು.
ಅಧಿಕಾರವೇ ಮುಖ್ಯವಲ್ಲ. ರಾಷ್ಟ್ರೀಯ ನಾಯಕರು ಯಾವ ರೀತಿ ಬದಲಾವಣೆಗೆ ಮುಂದಾಗಿದ್ದಾರೆ ಅದನ್ನು ಅವರು ಮಾಡುತ್ತಾರೆ ಎಂದರು.

ಈ ಮೂಲಕ ತನಗೆ ಟಿಕೆಟ್ ಕೈತಪ್ಪಲಿದೆ ಎಂಬುದನ್ನು ನಳಿನ್ ಕುಮಾರ್ ಸೂಚ್ಯವಾಗಿ ಹೇಳಿಕೊಂಡರೆ? ಅಥವಾ ಪಕ್ಷ ಬದಲಾವಣೆ ಬಯಸಿದರೆ ಅದಕ್ಕೆ ಬದ್ಧ ಎಂದು ಒಪ್ಪಿಕೊಂಡಂತೆ ಕಾಣುತ್ತಿದೆ.

ಮುಂದುವರಿದು ಮಾತನಾಡಿದ ನಳಿನ್, ನಾನು ಸೋಶಿಯಲ್ ಮೀಡಿಯಾದ ಟೀಕೆಗೆ ತಲೆಕೆಡಿಸಿಕೊಂಡವನಲ್ಲ. ಪಕ್ಷದ ನಿರ್ಧಾರ ಪಾಲಿಸುತ್ತೇನೆ. ಅಧಿಕಾರವನ್ನೇ ನಂಬಿಕೊಂಡಿಲ್ಲ. ಪಾರ್ಟಿ ಕೆಲಸ ಮುಖ್ಯ ಎಂದರು.

Latest Indian news

Popular Stories