ರಾಹುಲ್ ಗಾಂಧಿಯ ಕಪಾಳಕ್ಕೆ ಎರಡು ಬಾರಿಸದರೆ ಮಾತ್ರ ಆತ ಸರಿಯಾಗ್ತಾನೆ: ಭರತ್ ಶೆಟ್ಟಿ ವಿವಾದ

ಮಂಗಳೂರು: ಹಿಂದೂಗಳ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ಧೈರ್ಯ ಎಲ್ಲಿಂದ ಬರುತ್ತೆ ಎಂದೇ ಅರ್ಥ ಆಗ್ತಿಲ್ಲ. ಆತನ ಕಪಾಳಕ್ಕೆ ಎರಡು ಬಾರಿಸಿದರಷ್ಟೇ ಆತ ಸರಿಯಾಗುತ್ತಾನೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.


ಇತ್ತೀಚೆಗಿನ ರಾಹುಲ್ ಗಾಂಧಿಯ ಸಂಸತ್ ಭಾಷಣದಲ್ಲಿನ ಕೆಲ ಅಂಶಗಳನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾವೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.


ರಾಹುಲ್ ಗಾಂಧಿ ಒಬ್ಬ ಹುಚ್ಚ. 99 ಸೀಟ್ ಇಟ್ಟುಕೊಂಡು ಏನೊ ಒಂದು ಸಾಧನೆ ಮಾಡಿದಾಗೆ ಮಾಡುತ್ತಿದ್ದಾನೆ ಎಂದು ಭರತ್ ಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.


ರಾಜಕೀಯ ಮಾಡುವಲ್ಲಿ ನಾವು ಅದನ್ನು ಮಾಡುತ್ತೇವೆ. ಆದರೆ ಹಿಂದೂ ಸಮಾಜದ ಬಗ್ಗೆ ಈ ರೀತಿಯ ಮಾತುಗಳನ್ನು ಆಡಿದರೆ ಎಲ್ಲಿ ಶಸ್ತ್ರ ಪೂಜೆ ಮಾಡಬೇಕೋ ಅದೇ ಭಾಷೆಯಲ್ಲಿ ಉತ್ತರವನ್ನು ನೀಡುತ್ತೇವೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಆದರೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗುತ್ತಾನೆಂದು ಈ ಹುಚ್ಚನಿಗೆ (ರಾಹುಲ್ ಗಾಂಧಿಗೆ) ಗೊತ್ತಿಲ್ಲ ಎಂದು ಭರತ್ ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.

Latest Indian news

Popular Stories