ಸಂತ ಜೆರೋಸಾ ಪ್ರಕರಣ ಶಾಲೆಯೆದುರು ವೇದವ್ಯಾಸ ಕಾಮತ್ ಗೂಂಡಾಗಿರಿ: ದಿನೇಶ್ ಗುಂಡೂರಾವ್

ಮಂಗಳೂರು: ಸಂತ ಜೆರೋಸಾ ಶಾಲೆಯ ಮುಂಭಾಗ ಶಾಸಕ ವೇದವ್ಯಾಸ ಕಾಮತ್ ಗೂಂಡಾಗಿರಿ ತೋರಿದ್ದು, ಈ ಘಟನೆಯಿಂದ ಜಿಲ್ಲೆಗೆ ಕಳಂಕ ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೇದವ್ಯಾಸ ಕಾಮತ್ ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನು ಬಳಸಿ ಈ ರೀತಿ ವರ್ತಿಸಿದ್ದು, ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ.
ಹಿಂದೂ ಧರ್ಮದ ಹೆಸರಲ್ಲಿ ಪ್ರಚೋದನೆ ನೀಡಿರುವ ವೇದವ್ಯಾಸ ಕಾಮತ್ ವರ್ತನೆಯ ಬಗ್ಗೆ ಜಿಲ್ಲೆಯ ಹೊರಗಿನವರು ಕೇಳುತ್ತಿದ್ದಾರೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಯಾರ ಮೇಲೂ ಸುಳ್ಳು ಕೇಸು ದಾಖಲಾಗಿಲ್ಲ. ಭರತ್ ಶೆಟ್ಟಿ,ಶರಣ್ ಪಂಪ್ವೆಲ್ ಮೇಲೆ ಸುಳ್ಳು ಕೇಸ್ ದಾಖಲಾಗಿಲ್ಲ. ಅವರು ಶಾಲೆಯ ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರಚೋದನಕಾರಿ ಹೇಳಿಕೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದು ಅವರು ತಿಳಿಸಿದರು.

Latest Indian news

Popular Stories