ನನ್ನನ್ನು ಬಂಧಿಸಲು ಬಂದ ಪೊಲೀಸರು ಕಾರ್ಯಕರ್ತರನ್ನು ನೋಡಿ ಹಿಂದೆ ಹೋಗಿದ್ದಾರೆ – ಹರೀಶ್ ಪೂಂಜಾ

ಬೆಳ್ತಂಗಡಿ: ನನ್ನನ್ನು ಬಂಧಿಸಲು ಸರಕಾರ ಮತ್ತು ಪೊಲೀಸರು ವ್ಯವಸ್ಥಿತ ಸಂಚು ನಡೆಸಿದ್ದು, ಆದರೆ ಬಿಜೆಪಿ ಕಾರ್ಯಕರ್ತರ ಆವೇಶ ನೋಡಿ ಪೊಲೀಸರ ಹಿಂದಿರುಗಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.


ಬೆಳ್ತಂಗಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ನಮ್ಮ ಕಾರ್ಯಕರ್ತರ ತಾಖತ್ತಾಗಿದ್ದು, ವಿನಾಃ ಕಾರಣ ಅವರ ಮೇಲೆ ಪ್ರಕರಣ ದಾಖಲಿಸಿದರೆ ನಾವು ಸುಮ್ಮನಿರಲ್ಲ ಎಂದರು.


ನಾನು ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಮಾಡಿದವನಾಗಿದ್ದು, ಪೊಲೀಸರು ನನಗೆ ಕಾನೂನು ಪಾಠ ಮಾಡುವ ಅಗತ್ಯ ಇಲ್ಲ ಎಂದು ಶಾಸಕ ಹರೀಶ್ ಪೂಂಜಾ ಇದೇ ವೇಳೆ ಹೇಳಿದರು.

ನಾನು ಸಿದ್ದರಾಮಯ್ಯ ರಂತೆ ಅಧಿಕಾರಕ್ಕಾಗಿ ಪೊಲೀಸರ ಕಾಲರ್ ಪಟ್ಟಿ ಹಿಡಿದಿಲ್ಲ. ನಾನು ನನ್ನ ಕಾರ್ಯಕರ್ತರಿಗೆ ನ್ಯಾಯ ಕೊಡಲು ಪೊಲೀಸ್ ಠಾಣೆಗೆ ಹೋಗಿದ್ದೇನೆ ಎಂದರು.

Latest Indian news

Popular Stories