ಬಂಟ್ವಾಳ: ಚುನಾವಣೆಗೆ ನಿಲ್ಲುವುದಕ್ಕಾಗಿ ಎಲ್ಲಿಂದಲೋ ಬಂಟ್ವಾಳಕ್ಕೆ ಬಾರದೆ ಇಲ್ಲಿಂದಲೇ ರಾಜಕೀಯವನ್ನು ಆರಂಭಿಸಿದ್ದೇನೆ. ಕಾಂಗ್ರೆಸ್ ನೀಡಿದ ಎಲ್ಲ ಅವಕಾಶಗಳನ್ನು ಬಳಸಿ ಜನಸೇವೆ ಮಾಡಿದ್ದೇನೆ. ಈವರೆಗೆ 8 ಬಾರಿ ಸ್ಪರ್ಧಿಸಿದ್ದು ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನದು 9ನೇ ಚುನಾವಣೆಯಾಗಿದ್ದು, ಕೊನೆಯ ಬಾರಿಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾನು ಹೇಳಿದ್ದನ್ನು ಮಾಡಿದ್ದು, ಮಾಡಿದ್ದನ್ನೇ ಹೇಳಿದ್ದೇನೆ. ಯಾರೋ ಮಾಡಿರುವುದನ್ನು ತನ್ನದೆಂದು ಹೇಳುವ ಜಾಯಮಾನ ನನ್ನದಲ್ಲ. ಜನರು ಅವಕಾಶ ನೀಡಿದರೆ ಅದ್ಭುತವಾಗಿ ಕೆಲಸ ಮಾಡಿ ತೋರಿಸಲಿದ್ದೇನೆ ಎಂದರು. ಮಾ. 10ರಿಂದ ಕ್ಷೇತ್ರದಾದ್ಯಂತ ಕಾಂಗ್ರೆಸ್ ರಥ ಯಾತ್ರೆಯನ್ನು ನಡೆಸಲು ತೀರ್ಮಾ ನಿಸಿದ್ದೇವೆ ಎಂದು ತಿಳಿಸಿದರು.