ಮಂಗಳೂರಿನಲ್ಲಿ ನಿಲ್ಲದ ಅನೈತಿಕ ಪೊಲೀಸ್‌ಗಿರಿ: ಜೋಡಿಯನ್ನು ತಡೆದ ಮೂವರ ಬಂಧನ?

ಮಂಗಳೂರು: ನಗರದ ಹೊರವಲಯದ ಪಣಂಬೂರು ಬೀಚ್‌ಗೆ ಬಂದಿದ್ದ ಭಿನ್ನಕೋಮಿನ ಜೋಡಿಯ ಮೇಲೆ ಹಲ್ಲೆ ನಡೆಸಿದ ಮೂವರು ಸಂಘಪರಿವಾರದ ಕಾರ್ಯಕರ್ತರೆನ್ನಲಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಕೇರಳದ ಯುವಕ ಮತ್ತು ಬೆಂಗಳೂರಿನ ಯುವತಿ ಪಣಂಬೂರು ಬೀಚ್‌ಗೆ ವಿಹಾರಕ್ಕೆ ಬಂದಿದ್ದರು. ಈ ವೇಳೆ ಅವರನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರೆನ್ನಲಾದವರು ಜೋಡಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Latest Indian news

Popular Stories