ಜೆರೋಸಾ ಶಾಲೆ ವಿವಾದ: ವೇದವ್ಯಾಸ ಕಾಮತ್, ಭರತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

ಮಂಗಳೂರು: ಮಂಗಳೂರಿನ ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌, ಮಂಗಳುರು ಉತ್ತರ ಕ್ಷೇತ್ರದ ಶಾಸಕ ಭರತ್‌ ಶೆಟ್ಟಿ ಹಾಗೂ ಇತರರಿಗೆ ನಿರೀಕ್ಷಣ ಜಾಮೀನು ಮಂಜೂರಾಗಿದೆ.

ಜೆರಾಲ್ಡ್‌ ಲೋಬೋ ಎಂಬವರು ನೀಡಿದ್ದ ದೂರಿನಂತೆ ಮಂಗಳೂರಿನಲ್ಲಿ ಶಾಸಕರ ವಿರುದ್ದ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಮಂಜೂರಾಗಿದೆ.

ಶಾಸಕರಲ್ಲದೆ ವಿಶ್ವ ಹಿಂದು ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಕಾರ್ಪೊರೇಟರ್‌ ಗಳಾದ ಸಂದೀಪ್‌ ಹಾಗೂ ಭರತ್‌ ಕುಮಾರ್‌ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರಿಗೂ ನಿರೀಕ್ಷಣ ಜಾಮೀನು ಮಂಜೂರಾಗಿದೆ.

Latest Indian news

Popular Stories