ಟಿಕೆಟ್ ಕೈತಪ್ಪಿದ ಬಳಿಕ ನಳಿನ್ ಕುಮಾರ್ ಮಂಗಳೂರಿನಲ್ಲಿ ಹೇಳಿದ್ದೇನು?

ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿದ ಬಳಿಕ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದು, ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ನನಗೆ ಪಕ್ಷ ಬಹಳಷ್ಟು ಅವಕಾಶಗಳನ್ನು ನೀಡಿದ್ದು, ಕಾರ್ಯಕರ್ತರೂ ಪ್ರೀತಿಯಿಂದ ಬೆಳೆಸಿದ್ದಾರೆ. ಅಲ್ಲದೇ ನನಗೆ ರಾಜ್ಯಾಧ್ಯಕ್ಷದಂತ ದೊಡ್ಡ ಅವಕಾಶ ನೀಡಿದ್ದು, ಪಕ್ಷದ ವರಿಷ್ಠರ ನಂಬಿಕೆಗೆ ಚ್ಯುತಿ ತರದೇ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದರು.
ಪಕ್ಷ ಬ್ರೀಜೇಶ್ ಚೌಟ ಅವರಿಗೆ ಅವಕಾಶ ನೀಡಿದೆ. ಹೊಸಬರು, ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಅವರ ಜೊತೆ ನಿಂತು ಅವರನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದರು.

ಜಿಲ್ಲೆಗೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ಮೋದಿ ಕ್ಷೇತ್ರಕ್ಕೆ ಕೇಳಿದ ಎಲ್ಲವನ್ನೂ ಕೊಟ್ಟಿದ್ದಾರೆ ಮತದಾರ ಪೂರ್ಣ ಆಶೀರ್ವಾದ ಮಾಡಿದ್ದಾರೆ. 15 ವರ್ಷ ಲೋಕಸಭೆ ಪಾರ್ಟಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಇಷ್ಟು ಧೀರ್ಘ ಕಾಲದಲ್ಲಿ ಸಂಸದನಾಗಿ ದಕ್ಷಿಣ ಕನ್ನಡದಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞಬಾಗಿದ್ದೇನೆ. ಸಾಯುವವರೆಗೂ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

Latest Indian news

Popular Stories