ವಿಟ್ಲ: ವೃದ್ಧ ಕ್ರೈಸ್ತ ದಂಪತಿಗಳನ್ನು ಥಳಿಸಿದ ಚರ್ಚ್ ಧರ್ಮಗುರು: ವೀಡಿಯೋ ವೈರಲ್

ಮಂಗಳೂರು: ಚರ್ಚ್ ಧರ್ಮಗುರುವೊಬ್ಬರು ವೃತ್ತ ದಂಪತಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯನಡ್ಕದ ಮಣಿಲಾ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಪೆರಿಯಲ್ತಡ್ಕ ಕ್ರಿಸ್ತ‌ ಕಿಂಗ್ ಪೆರಿಶ್ ನ ಧರ್ಮಗುರು ನೆಲ್ಸನ್ ಒಲಿವೇರಾ ಹಲ್ಲೆ ಮಾಡಿದ ಪಾದ್ರಿ ಎನ್ನಲಾಗಿದ್ದು, ಜಾರ್ಜ್ ಮೊಂತೇರೋ (79) ಮತ್ತು ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ ಎಂದು ತಿಳಿದು ಬಂದಿದೆ.
ದಂಪತಿ ಚರ್ಚ್‌ಗೆ ದೇಣಿಗೆ ನೀಡಿಲ್ಲ ಎಂದು ಫಾದರ್ ವೃದ್ಧರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಫೆ.29 ರಂದು ಆಶೀರ್ವಚನ ನೀಡಲು ಬಂದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಪೊಲೀಸರು,
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕ ಎಂಬಲ್ಲಿ, ಧಾರ್ಮಿಕ ವ್ಯಕ್ತಿಯೊಬ್ಬರು ಹಲ್ಲೆ ನಡೆಸುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದ್ರಿ ವಿಡಿಯೋ ದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಕೋಮಿಗೆ ಸೇರಿದವರಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.

ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದಾಗಿ ಕೇಳಿಕೊಂಡಿದ್ದಾರೆ.

Latest Indian news

Popular Stories