ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಸಹಜ ಸ್ಥಿತಿಯತ್ತ ದಾವಣಗೆರೆ; ನಗರದಾದ್ಯಂತ ಪೊಲೀಸ್ ಬಂದೋಬಸ್ತ್

ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನೆ ವೇಳೆ ದಾವಣಗೆರೆಯಲ್ಲಿ ಕಲ್ಲು ತೂರಾಟ ಘಟನೆ ನಡೆದು, ಉದ್ವಿಗ್ನಗೊಂಡಿದ್ದ ಪರಿಸ್ಥಿತಿ ಸದ್ಯ ಶಂತವಾಗಿದೆ.

ದಾವಣಗೆರೆ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಅರಳಿಮರ ವೃತ್ತ, ನೂರಾಣಿ ಶಾದಿ ಮಹಲ್ ರಸ್ತೆಯಲ್ಲಿ ಶಾಂತವಾತಾವರಣ ನಿರ್ಮಾಣವಾಗಿದೆ.

ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರಿಗಳಿಂದ ವಹಿವಾಟು ಆರಂಭವಾಗಿದೆ.

ಮುಸ್ಲಿಂ ಸಮುದಾಯದವರೂ ಮಸೀದಿಗಳತ್ತ ತೆರಳುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿದೆ.

Latest Indian news

Popular Stories