ಧಾರವಾಡ ನಾಣ್ಯ ನುಂಗಿದ ಎರಡು ವರ್ಷದ ಮಗು ಮೃತ್ಯು

ಧಾರವಾಡ: ಮನೆಯಲ್ಲಿ ಆಟವಾಡುತ್ತ ನಾಣ್ಯ ನುಂಗಿದ ಎರಡು ವರ್ಷದ ಮಹ್ಮದ ಜುಬೇರ್‌ ಸಾಲಿ ಎಂಬ ಮಗು ಮೃತಪಟ್ಟ ಘಟನೆ ಕೋಳಿಕೇರಿಯಲ್ಲಿ ನಡೆದಿದೆ

ಮನೆಯಲ್ಲಿ ಒಂದು ರೂಪಾಯಿ ನಾಣ್ಯದೊಂದಿಗೆ ಆಟವಾಡುತ್ತಿದ್ದ ಮಗು ನಾಣ್ಯವನ್ನು ನುಂಗಿದೆ.

ನಾಣ್ಯ ಗಂಟಲಿನಲ್ಲಿ ಸಿಲುಕಿದ ಪರಿಣಾಮ ಮಗು ಒದ್ದಾಡಲು ಶುರು ಮಾಡಿದ್ದು, ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.

Latest Indian news

Popular Stories