ಬೈಜು ಶಿಕ್ಷಣ ಸಂಸ್ಥೆಗೆ ಭಾರೀ ನಷ್ಟ: ಒಂದು ವರ್ಷದಲ್ಲೇ $22 ಬಿಲಿಯನ್‌ನಿಂದ $3 ಬಿಲಿಯನ್‌ಗೆ ಕುಸಿತ

ನವ ದೆಹಲಿ: ಬೈಜುಸ್‌ಗೆ ಮತ್ತೊಂದು ಹೊಡೆತದ ಬಿದ್ದಿದ್ದು ಟೆಕ್ ಹೂಡಿಕೆದಾರ ಪ್ರೊಸಸ್ ಎಜುಟೆಕ್ ಸ್ಟಾರ್ಟ್‌ಅಪ್‌ನ ಮೌಲ್ಯಮಾಪನ $3 ಶತಕೋಟಿಗೆ ಕುಸಿದಿದೆ ಎಂದು NDTV ವರದಿ ಮಾಡಿದೆ.

ಕಳೆದ ವರ್ಷ ಅದರ ಗರಿಷ್ಠ ಮೌಲ್ಯಮಾಪನ $22 ಶತಕೋಟಿ ಇದ್ದು 86% ಕುಸಿತ ಕಂಡಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕ್ಷಿಪ್ರ ವಿಸ್ತರಣೆಯ ನಂತರ, ಬೈಜುಸ್ ನಗದು ಹರಿವಿನ ಸಮಸ್ಯೆ ಎದುರಿಸುತ್ತಿದೆ. $1.2 ಬಿಲಿಯನ್ ಸಾಲದೊಂದಿಗೆ ಸಮಸ್ಯೆಯ ಸುಳಿಗೆ ಸಿಲುಕಿಗೊಂಡಿದೆ.

ಕಳೆದ ವರ್ಷದಲ್ಲಿ, Prosus ಮತ್ತು Blackrock ಸೇರಿದಂತೆ ಷೇರುದಾರರು ಮಾರ್ಚ್‌ನಲ್ಲಿ $11 ಶತಕೋಟಿ, ಮೇನಲ್ಲಿ $8 ಶತಕೋಟಿ ಮತ್ತು ಜೂನ್‌ನಲ್ಲಿ $5 ಶತಕೋಟಿಗೆ ಸತತವಾಗಿ ಬೈಜು ಮೌಲ್ಯಮಾಪನವನ್ನು ಕಡಿತಗೊಳಿಸಿದ್ದಾರೆ.

₹ 2,250 ಕೋಟಿ ನಷ್ಟವನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಮಧ್ಯಂತರ ಸಿಇಒ ಎರ್ವಿನ್ ಟು ಈ ವಿಚಾರ ಬಹಿರಂಗಗೊಳಿಸಿದ್ದಾರೆ.  ಬೈಜೂಸ್ ತನ್ನ 2021/22 ಹಣಕಾಸು ವರದಿ ಸಲ್ಲಿಸುವುದನ್ನು ಸುಮಾರು ಒಂದು ವರ್ಷ ವಿಳಂಬಗೊಳಿಸಿದೆ. ಇದು ಆಡಿಟರ್ ಡೆಲಾಯ್ಟ್ ಮತ್ತು ಮೂವರು ಮಂಡಳಿಯ ಸದಸ್ಯರು ಮಂಡಳಿ ತ್ಯಜಿಸಲು ಮುಖ್ಯ ಕಾರಣವಾಗಿತ್ತು. ಅದರ ಮುಖ್ಯ ಹಣಕಾಸು ಅಧಿಕಾರಿ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಕೂಡ ಕಳೆದ ವಾರ ಸಂಸ್ಥೆ ತ್ಯಜಿಸಿದ್ದಾರೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.

Latest Indian news

Popular Stories