ಮಲಬಾರ್ ಗೋಲ್ಡ್ & ಡೈಮಂಡ್ಸ್ ಮತ್ತು ನಾಲ್ಕು ಇತರ ಆಭರಣ ಸಂಸ್ಥೆಗಳು ಫ್ಯಾಷನ್ ಪರಿಕರ ತಯಾರಕ ಟೈಟಾನ್ ಜೊತೆಗೆ ಟಾಪ್-100 ಐಷಾರಾಮಿ ಬ್ರಾಂಡ್‌ಗಳ ಜಾಗತಿಕ ಶ್ರೇಣಿಯಲ್ಲಿ ಸ್ಥಸನ ಪಡೆದುಕೊಂಡಿದೆ.
ಮಲಬಾರ್ ಗೋಲ್ಡ್ ಅಗ್ರ ಭಾರತೀಯ ಅಂತರರಾಷ್ಟ್ರೀಯ ಆಭರಣ ಬ್ರ್ಯಾಂಡ್ ಎಂದು 19 ನೇ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಟಾಟಾ ಸಮೂಹದ ಟೈಟಾನ್ ಕಂಪನಿಯು 24 ನೇ ಸ್ಥಾನವನ್ನು ಪಡೆದುಕೊಂಡಿದೆ.
ಆಭರಣ ಸಂಸ್ಥೆಗಳಾದ ಕಲ್ಯಾಣ್ ಜ್ಯುವೆಲರ್ಸ್ ಮತ್ತು ಜಾಯ್ ಅಲುಕ್ಕಾಸ್ ಡೆಲಾಯ್ಟ್ ಜಾಗತಿಕ ಐಷಾರಾಮಿ ಸರಕುಗಳ ಪಟ್ಟಿ 2023 ರ ಸಾಲಿನ ಕ್ರಮವಾಗಿ 46 ಮತ್ತು 47 ನೇ ಸ್ಥಾನ ಪಡೆದುಕೊಂಡಿದೆ. ಸೆಂಕೋ ಗೋಲ್ಡ್ & ಡೈಮಂಡ್ಸ್ ಮತ್ತು ತಂಗಮಾಯಿಲ್ ಜ್ಯುವೆಲ್ಲರಿಕ್ರಮವಾಗಿ 78 ನೇ ಮತ್ತು 98 ನೇ ಸ್ಥಾನದಲ್ಲಿವೆ.
ವೈವಿಧ್ಯಮಯ ಫ್ರೆಂಚ್ ಐಷಾರಾಮಿ ದೈತ್ಯ LVMH ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೋಝಿಕ್ಕೋಡ್ ಮೂಲದ ಮಲಬಾರ್‌ಗೆ, 2023 ರಲ್ಲಿ ಆದಾಯದ ದೃಷ್ಟಿಯಿಂದ $4 ಶತಕೋಟಿಗಿಂತ ಹೆಚ್ಚಿನ ಮೌಲ್ಯದೊಂದಿಗೆ ಪಟ್ಟಿಗೆ ಇದು ಮೊದಲ ಬಾರಿ ಸ್ಥಾನ ದೊರಕಿದೆ. ಆದರೆ ಟೈಟಾನ್ $3.67 ಶತಕೋಟಿ ವಹಿವಾಟು ನಡೆಸಿದೆ.