`ಕಲಿಕಾ ಸಾಧನಾ ಸಮೀಕ್ಷೆ’ : ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 3, 5, 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಜನವರಿ 17, 18 ರಂದು ಕಲಿಕಾ ಸಾಧನಾ ಸಮೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ರಾಜ್ಯದ ಆಯ್ದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 3, 5, 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಯಾಂಪಲ್‌ ಬೇಸ್‌ ಆಧಾರದ ಮೇಲೆ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆ (SAS) ಯನ್ನು ದಿನಾಂಕ: 17.01.2023 ಮತ್ತು 18,01.2023 ರಂದು ನಡೆಸಲಾಗುತ್ತಿದೆ.

  • ರಾಜ್ಯದ ಆಯ್ದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 3, 5, 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಮೀಕ್ಷೆ ನಡೆಸಲಾಗುವುದು.

3 ನೇ ತರಗತಿ ವಿದ್ಯಾರ್ಥಿಗಳಿಗೆ 2 ವಿಷಯಗಳಿಗೆ, 5 ನೇ ತರಗತಿ ವಿದ್ಯಾರ್ಥಿಗಳಿಗೆ 4 ವಿಷಯಗಳಿಗೆ ಮತ್ತು 8, 9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ 6 ವಿಷಯಗಳಿಗೆ ರಾಜ್ಯ ಕಲಿಕಾ ಸಾಧನಾ ಸಮೀಕ್ಷೆ ನಡೆಸಲಾಗುವುದು.

ಬಹುಆಯ್ಕೆ ಮತ್ತು ವಿವರಣಾತ್ಮಕ ಪ್ರಶ್ನೆಗಳ ಮೂಲಕ ಓ.ಎಂ.ಆರ್ ಬಳಸಿ ಮೌಲ್ಯಾಂಕನ

• 3 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ – 33573

  • 5 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ -35645
  • 8 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ – 39932
  • 9 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ -52919

*10 ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ – 49451

  • ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 211520

ಆಯ್ಕೆಯಾದ ಒಟ್ಟು ಶಾಲೆಗಳ ಸಂಖ್ಯೆ :- 3308

3 ಮತ್ತು 5 ನೇ ತರಗತಿಗೆ:- ಕನ್ನಡ ಮಾಧ್ಯಮ 8, 9 ಮತ್ತು 10 ನೇ ತರಗತಿಗೆ: ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ

ವಿಷಯ:-

3 ನೇ ತರಗತಿಗೆ:- ಭಾಷೆ (ಕನ್ನಡ) ಮತ್ತು ಗಣಿತ (Language and Numeracy) 5 ನೇ ತರಗತಿಗೆ:- ಕನ್ನಡ, ಇಂಗ್ಲೀಷ್, ಗಣಿತ ಮತ್ತು ಪರಿಸರ ಅಧ್ಯಯನ,

8, 9 ಮತ್ತು 10 ನೇ ತರಗತಿಗೆ:- ಪ್ರಥಮ ಭಾಷೆ (ಕನ್ನಡ, ಇಂಗ್ಲೀಷ್), ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ),

ತೃತೀಯ ಭಾಷೆ (ಹಿಂದಿ), ಗಣಿತ, ವಿಜ್ಞಾನ, ಸಮಾಜ ವಿಜ್ಞಾನ,

ಸಮೀಕ್ಷೆಯ ಪ್ರಶ್ನೆ ಪತ್ನಿಗೆ ಸ್ವರೂಪ

3ನೇ ತರಗತಿಗೆ:

  • 3ನೇ ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟು 30 ಅಂಕಗಳಿಗೆ ಒಂದು ದಿನದ ಸಮೀಕ್ಷೆಯನ್ನು ನಡೆಸಲಾಗುವುದು.
  • 30 ಅಂಕಗಳಲ್ಲಿ 20 ಅಂಕಗಳಿಗೆ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಪೂರ್ವಮುದ್ರಿತ OMR (MultiColour) ಬಳಸಿ ಸಮೀಕ್ಷೆಯನ್ನು ನಡೆಸಲಾಗುವುದು
  • 10 ಅಂಕಗಳಿಗೆ ಒಂದು ಪದ / ವಾಕ್ಯದಲ್ಲಿ ಉತ್ತರಿಸುವ 10 ಪ್ರಶ್ನೆಗಳನ್ನು ನೀಡಲಾಗುವುದು, ಈ 10 ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಉತ್ತರ ಉಳೆಗಳನ್ನು ನೀಡಲಾಗುವುದು

ಬಹುಆಯ್ಕೆ ಮಾದರಿಯ 20 ಪ್ರಶ್ನೆಗಳಲ್ಲಿ 10 ಪ್ರಶ್ನೆಗಳು ಭಾಷೆಗೆ 10 ಪ್ರಶ್ನೆಗಳು ಗಣಿತ ವಿಷಯಕ್ಕೆ ಮತ್ತು 10 ಒಂದು ಪದ / ವಾಕ್ಯದಲ್ಲಿ ಉತ್ತರಿಸುವ ಪಶ್ನೆಗಳಲ್ಲಿ 5 ಪ್ರಶ್ನೆಗಳು ಭಾಷೆಗೆ, 5 ಪ್ರಶ್ನೆಗಳು ಗಣಿತ ವಿಷಯಕ್ಕೆ ನಿಗದಿಪಡಿಸಲಾಗಿದೆ.

Latest Indian news

Popular Stories