ಉಡುಪಿ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನಲ್ಲಿ ನಡೆದ 23ನೇ ವಾರ್ಷಿಕ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2021ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಉಡುಪಿಯ ನಿವಾಸಿ ಆರೀಜ್ ಅಹಮದ್ ಅವರನ್ನು ಪುರಸ್ಕರಿಸಲಾಯಿತು.
ಆರೀಜ್, ಆಡಿಯೊಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಯಲ್ಲಿ (BASLP) ತನ್ನ ಬ್ಯಾಚುಲರ್ ಪದವಿಯನ್ನು ಡಿಸ್ಟಿಂಕ್ಷನ್‌ನೊಂದಿಗೆ ಪೂರ್ಣಗೊಳಿಸಿದರು. ಇವರು ಉಡುಪಿಯ ಖಲೀಲ್ ಅಹಮದ್ ಮತ್ತು ಜೀನತ್ ದಂಪತಿಯ ಪುತ್ರಿ.
ಆರೀಜ್ ಅವರು ಮಣಿಪಾಲ ಮತ್ತು ಮಂಗಳೂರು ಕ್ಯಾಂಪಸ್‌ನಿಂದ ಬಿಎಎಸ್‌ಎಲ್‌ಪಿ ಬ್ಯಾಚ್‌ನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದಿದ್ದಾರೆ.