ಮೆಲ್ಕಾರ್ ಮಹಿಳಾ ಕಾಲೇಜು 14 ನೇ ವಾರ್ಷಿಕೋತ್ಸವದ ಸಂಭ್ರಮ


—-=——————————
ಬಂಟ್ವಾಳ, ಡಿ. 31:ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜ್, ಮಾರ್ನಬೈಲು ಇದರ 14ನೇ ವಾರ್ಷಿಕೋತ್ಸವವು ಇಂದು ಬಹಳ ವಿಜೃಂಭಣೆಯಿಂದ ಜರಗಿತು.

IMG 20221231 WA0078 Education
IMG 20221231 WA0083 Education


ಸಮಾರಂಭವನ್ನು ಉದ್ಘಾಟಿಸಿದ ಬಂಟ್ವಾಳ ಉಪ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರತಾಪ್ ಸಿಂಗ್
ತಾರೊಟ್ ಮಾತನಾಡುತ್ತಾ ಇಂದಿನ ಯುವ ಜನತೆ, ವಿದ್ಯಾರ್ಥಿಗಳು ಮೊಬೈಲ್ ದಾಸರಾಗುತ್ತಿದ್ದು, ತನ್ಮೂಲಕ ಅವರ ಅಮೂಲ್ಯ ಸಮಯವನ್ನು ವ್ಯರ್ಥ ವಾಗುವುದರೊಂದಿಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಮಾತ್ರವಲ್ಲ ಕ್ರಿಮಿನಲ್ ಕೃತ್ಯಗಳಿಗೆ ಮತ್ತು ಸೈಬರ್ ಅಪರಾಧಗಳಿಗೆ ಕೂಡಾ ಬಲಿಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಹಾಗೂ ಪ್ರಸಕ್ತ ಸನ್ನಿವೇಶದಲ್ಲಿ
ವಿದ್ಯಾರ್ಥಿನಿಯರು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಪಿ. ಎಲ್. ಧರ್ಮ ಮಾತನಾಡುತ್ತ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗುವುದರೊಂದಿಗೆ ಸಮಾಜದಲ್ಲಿ ಮುಂದುವರಿದು, ಶೋಷಣೆ ಅಸಮಾನತೆ, ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕೆಂದು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ
ಶಾಹುಲ್ ಹಮೀದ್ ಎಂ. ಅಧ್ಯಕ್ಷರು, ಶಹರುದ್ದೀನ್ ಎಜುಕೇಶನ್ ಸೆಂಟರ್, ಮಂಜೇಶ್ವರ ಮಾತನಾಡುತ್ತಾ,
ಇಂದಿನ ಸಮಾಜದಲ್ಲಿ ಪುರುಷರಂತೆ ಮಹಿಳೆಯರು
ವಿದ್ಯಾವಂತರಾಗಬೇಕಿದ್ದು
ಈ ಮಹಿಳಾ ಶಿಕ್ಷಣ ಸಂಸ್ಥೆಯು ಈ ದಿಶೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎಂದರು.


ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿಕೊಂಡಿದ್ದ ಕಾಲೇಜಿನ ಸ್ಥಾಪಕಧ್ಯಕ್ಷರಾದ ಡಾ. ಎಸ್.ಎಂ.ರಶೀದ್ ಹಾಜಿ ಮಾತನಾಡುತ್ತಾ ಇಂದಿನ ಸಮಾಜದಲ್ಲಿ ಮಹಿಳೆಯರು ಮುಂದುವರಿಯಲು ಶಿಕ್ಷಣವು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಈ ಮಹಿಳಾ ಶಿಕ್ಷಣ ಸಂಸ್ಥೆಯು
ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಬಿ.ಕೆ. ಅಬ್ದುಲ್ ಲತೀಫ್ ವಾರ್ಷಿಕ ವರದಿಯನ್ನು ಮಂಡಿಸಿದರು, ಉಪ ಪ್ರಾಂಶುಪಾಲರಾದ ಸುನೀತಾ ಪಿರೇರ ಮತ್ತು ಉಪನ್ಯಾಸಕರಾದ ಆಫ್ರೋಝ ನಫೀಸರವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಹವ್ವ ನೌಫ ಸ್ವಾಗತಿಸಿ, ಕೊನೆಯಲ್ಲಿ
ಶಹನಾಝ್ ಧನ್ಯವಾದವಿತ್ತರು, ಸಾರಾ ಸಫ್ವತ್ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಅಪರಾಹ್ನ, ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Latest Indian news

Popular Stories