ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಪ್ರೊ.ಮುಜಾಫರ್ ಹುಸೇನ್ ಅಸ್ಸಾದಿ

ಈ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ.ಎಚ್.ರಾಜಶೇಖರ್ ಅವರ ಅವಧಿಯು ಫೆ.19ಕ್ಕೆ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ನೂತನ ಹಂಗಾಮಿ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಮುಜಾಫರ್ ಹುಸೇನ್ ಅಸ್ಸಾದಿ ಅವರನ್ನು
ನೇಮಕ ಮಾಡಿ, ರಾಜ್ಯಪಾಲರು ಆದೇಶಿಸಿದ್ದಾರೆ.

ಪ್ರೊ. ರಾಜಶೇಖರ್ ಅವರ ಅವಧಿಯು ಫೆ.19ಕ್ಕೆ
ಅಂತ್ಯವಾಗಲಿದೆ. ಆದರೆ, ಶನಿವಾರ ಮತ್ತು ಭಾನುವಾರ
ಸರ್ಕಾರಿ ರಜಾ ದಿನವಾಗಿರುವ ಕಾರಣ ಪ್ರೊ.ಮುಜಾಫರ್
ಅಸ್ಸಾದಿ ಶುಕ್ರವಾರ (ಫೆ.17)ರಂದು ಅಧಿಕಾರ
ಸ್ವೀಕರಿಸುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹೋಟ್
ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Latest Indian news

Popular Stories